ಪುಲ್ವಾಮ ದಾಳಿ ನಂತರ 2 ಗಂಟೆ ಪ್ರಧಾನಿ ಎಲ್ಲಿದ್ದರು ಎಂದು ಉತ್ತರಿಸಬೇಕು: ಕೇಂದ್ರ ಸಚಿವೆ ಅನುಪ್ರಿಯಾ

Update: 2019-02-22 15:12 GMT

ಬರೇಲಿ(ಉ.ಪ್ರ),ಫೆ.22: ಮಿತ್ರಪಕ್ಷ ಬಿಜೆಪಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ತಲೆದೋರಿವೆ ಮತ್ತು ಲೋಕಸಭಾ ಚುನಾವಣೆಗಳಿಗಾಗಿ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ತನ್ನ ಪಕ್ಷವು ಮುಕ್ತವಾಗಿದೆ ಎಂದು ಅಪ್ನಾ ದಳದ ನಾಯಕಿ ಹಾಗೂ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿರುವ ಅಪ್ನಾ ದಳ 2014ರ ಲೋಕಸಭಾ ಚುನಾವಣೆಯಲ್ಲಿ ಮಿರ್ಝಾಪುರ ಮತ್ತು ಪ್ರತಾಪಗಡ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಭಯೋತ್ಪಾದಕ ದಾಳಿ ನಡೆದಿರುವುದು ಎರಡು ಗಂಟೆಗಳ ಕಾಲ ಪ್ರಧಾನಿಯವರಿಗೆ ತಿಳಿದೇ ಇರಲಿಲ್ಲ ಅಥವಾ ಅವರಿಗೆ ಅದು ತಿಳಿದಿತ್ತು ಮತ್ತು ಅದರ ಬಗ್ಗೆ ಸಂಪೂರ್ಣ ಅಸಡ್ಡೆ ಹೊಂದಿದ್ದರು. ಇವೆರಡೂ ಸ್ಥಿತಿಗಳಲ್ಲಿ ಆ ಎರಡು ಗಂಟೆೆಗಳ ಬಗ್ಗೆ ಪ್ರಧಾನಿ ಉತ್ತರಿಸಲೇಬೇಕಾದ ಅಗತ್ಯವಿದೆ ಎಂದ ತಿವಾರಿ,ಇವೆರಡೂ ಚಿತ್ರಣಗಳು ದೇಶಕ್ಕೆ ಒಳ್ಳೆಯದಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News