ಪ.ಜಾತಿ, ಪಂಗಡ ಪ್ರಮಾಣ ಪತ್ರಕ್ಕೆ 28 ವಿಧದ ಪರಿಶೀಲನೆ: ಠಾಗೋರ್

Update: 2019-02-23 14:09 GMT

ಉಡುಪಿ, ಫೆ. 23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಾಗ 28 ವಿಧದ ಪರಿಶೀಲನೆ ನಡೆಸಿ, ಪ್ರಮಾಣ ಪತ್ರ ವಿತರಿಸಬೇಕಾಗಿದೆ. ಈ ಕುರಿತಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದಿಂದ ಸಮಗ್ರ ಮಾಹಿತಿ ನೀಡಲಾಗಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ನಿವೃತ್ತ ಎಡಿಜಿಪಿ ರವೀಂದ್ರನಾಥ ಠಾಗೂರ್ ತಿಳಿಸಿದ್ದಾರೆ.

ಶನಿವಾರ ಜಿಲ್ಲಾಡಳಿತ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಉಡುಪಿ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಾಗ ಮತ್ತು ಪಡೆಯುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡುತಿದ್ದರು.

ಪ.ಜಾತಿ, ಪಂಗಡ ಪ್ರಮಾಣ ಪತ್ರ ನೀಡಲು ಅರ್ಜಿದಾರನ ಪೋಷಕರ ವಿಚಾರಣೆ, ಆತನ ಮನೆಯಲ್ಲಿನ ದೇವರು, ಮನೆಯ ಆಚರಣೆ, ಮಗು ಜನಿಸಿದಾಗ, ಮದುವೆ ಸಂದರ್ಭದಲ್ಲಿ, ಮರಣ ಹೊಂದಿದಾಗ ಆಚರಿಸುವ ಆಚರಣೆಗಳು, ನೆರೆಹೊರೆಯವರ ವಿಚಾರಣೆ ಸೇರಿದಂತೆ ವಿವಿಧ ರೀತಿಯ 28 ವಿಧದಲ್ಲಿ ಪರಿಶೀಲನೆ ನಡೆಸಬೇಕಾಗಿದೆ. ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ತಹಶೀಲ್ದಾರ್‌ಗಳಿಗೆ ನೀಡಲಾಗಿದೆ ಎಂದವರು ವಿವರಿಸಿದರು.

ಅರ್ಜಿದಾರ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ ಒಂದು ತಿಂಗಳ ಅವಧಿಯೊಳಗೆ ವಿತರಿಸಬೇಕು ಎಂಬ ನಿಯಮವಿದೆ. ಅದರೆ ಅನಿವಾರ್ಯ ಸಂದರ್ಭದಲ್ಲಿ 2 ತಿಂಗಳವರೆಗೆ ವಿಸ್ತರಿಸಬಹುದಾಗಿದೆ. ತಹಶೀಲ್ದಾರ್‌ಗಳು ಕಡ್ಡಾಯವಾಗಿ ಸ್ಥಳ ಮಹಜರು ಮಾಡಿ ಪ್ರಮಾಣ ಪತ್ರ ವಿತರಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಸಂಬಂಧಪಟ್ಟ ತಹಶೀಲ್ದಾರ್ ಮೇಲೆ ಸಹ ಕ್ರಿಮಿನಲ್ ಕೇಸ್ ದಾಖಲಿಸಲು ಹಾಗೂ 5,000ರಿಂದ 20,000ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಠಾಗೋರ್ ಹೇಳಿದರು.

ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ 1850ಕ್ಕೂ ಅಧಿಕ ಸುಳ್ಳು ಪ.ಜಾತಿ ಪಂಗಡದ ಪ್ರಮಾಣಪತ್ರ ಪಡೆದವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ತಹಶೀಲ್ದಾರ್ ನೀಡಿದ ಪ.ಜಾತಿ ಪಂಗಡ ಪ್ರಮಾಣ ಪತ್ರವನ್ನು ರದ್ದುಗೊಳಿಸಲು ಮತ್ತು ವ್ಯಕ್ತಿಯ ಜಾತಿಯನ್ನು ತೀರ್ಮಾನ ಮಾಡಲು ಯಾವುದೇ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಸಂಸತ್ತು ಮತ್ತು ರಾಷ್ಟ್ರಪತಿ ಮಾತ್ರ ಜಾತಿಯ ಸೇರ್ಪಡೆ ಕುರಿತು ತೀರ್ಮಾನ ತೆಗೆದುಕೊಳ್ಳಬಹುದು. ಪ್ರಮಾಣಪತ್ರ ನೀಡುವ ಕುರಿತ ಅರ್ಜಿದಾ ರರ ಅರ್ಜಿಯನ್ನು ತಹಶೀಲ್ದಾರ್ ಸಕಾರಣವಿಲ್ಲದೇ ತಿರಸ್ಕರಿಸಿದರೆ, ಸಂಬಂಧ ಪಟ್ಟ ಉಪ ವಿಬಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಠಾಗೂರ್ ತಿಳಿಸಿದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿಯ ನಿವೃತ್ತ ಎಸ್ಪಿ ಅಶೋಕ್ ಕುರೇರಾ ಮಾತನಾಡಿ, ಪ.ಪಂಗಡದ ಜಾತಿ ಪ್ರಮಾಣ ಪತ್ರವನ್ನು ಅ್ಯರ್ಥಿಯ ಹುಟ್ಟೂರಿನ ಆಧಾರದ ಮೇಲೆ ನೀಡಲಾಗುತ್ತದೆ. ಅ್ಯರ್ಥಿಯ ಹುಟ್ಟೂರನ್ನು ಆತನ ತಂದೆ-ತಾಯಿಯ ಜನ್ಮಸ್ಥಳದ ಆಧಾರ ದಲ್ಲಿ ನಿರ್ಧರಿಸಲಾಗುತ್ತದೆ. ಸಂವಿಧಾನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲಾಗಿದೆ. ಮೀಸಲಾತಿ ಪಡೆಯು ವುದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರತಿಯೊಬ್ಬರ ಹಕ್ಕಾಗಿದೆ ಎಂದರು.

ಆದರೆ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಹೆಚ್ಚಾದಂತೆ ಪ.ಪಂಗಡದವರು ಸಿಗಬೇಕಾದ ಮೀಸಲಾತಿಯಿಂದ ವಂಚಿತರಾಗುತ್ತಿದ್ದು, ತಹಶೀಲ್ದಾರ್‌ಗಳು ಯಾವುದೇ ಆಮಿಷಗಳಿಗೆ ಬಲಿಯಾಗದೇ ನ್ಯಾಯಯುತವಾಗಿ, ಕಾನೂನು ಬದ್ಧವಾಗಿ ಪರಿಶೀಲನೆ ನಡೆಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಿದ್ದಲ್ಲಿ ಶೇ.100ರಷ್ಟು ಪ. ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ತಡೆಯಬಹುದು ಎಂದರು.

ಅಭ್ಯರ್ಥಿಯಿಂದ ಅರ್ಜಿ ಸ್ವೀಕರಿಸಿದ ತಹಶೀಲ್ದಾರರು ಖುದ್ದಾಗಿ ಅ್ಯರ್ಥಿ ಯನ್ನು ಭೇಟಿಯಾಗಿ ಸ್ಥಳ ಪರಿಶೀಲನೆ, ಅ್ಯರ್ಥಿಯ ಸಂಬಂಧಿಕರು, ನೆರೆ ಹೊರೆಯವರ ಬಳಿ ಚರ್ಚಿಸಿ ಮಾಹಿತಿ ಪಡೆಯಬೇಕು. ಅ್ಯರ್ಥಿಯ ಧರ್ಮದ ಆಚರಣೆ, ಇತರ ಆಚರಣೆಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ಮಾಡಬೇಕಾಗುತ್ತದೆ. ಹಾಗೂ ಸ್ಕೂಲ್ ಲೀವಿಂಗ್ ಹಾಗೂ ಟ್ರಾನ್ಸ್‌ಪರ್ ಸರ್ಟಿಫಿಕೇಟ್‌ನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.

ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರಕಾರದ ಸೌಲ್ಯಗಳನ್ನು ಪಡೆಯುವುದು ಕಾನೂನು ಬಾಹಿರವಾಗಿದ್ದು ಶಿಕ್ಷಾರ್ಹ ಅಪರಾಧ ವಾಗಿದೆ. ಹಾಗೂ ಈ ರೀತಿ ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿ, ಆತನ ಪೋಷಕರು ಹಾಗೂ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬಹುದಾಗಿದೆ ಎಂದು ಅಶೋಕ್ ನುಡಿದರು.

ಯಾವುದೇ ವ್ಯಕ್ತಿ ಪ.ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರಕಾರದ ಸೌಲ್ಯವನ್ನು ಪಡೆದರೆ ಅದು ಅಸಿಂಧುವಾಗಲಿದೆ. ಸುಳ್ಳು ಪ್ರಮಾಣ ಪತ್ರ ನೀಡಿ ಸರಕಾರಿ ಉದ್ಯೋಗವನ್ನು ಪಡೆದಿದ್ದರೆ ಅಂತಹ ಅ್ಯರ್ಥಿಯನ್ನು ಯಾವುದೇ ಮಾಹಿತಿ ನೀಡದೇ ನೇರವಾಗಿ ನೌಕರಿಯಿಂದ ತೆಗೆಯಬಹುದು. ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಪಡೆದ ಪದವಿ (ಡಿಗ್ರಿ), ಸರಕಾರಿ ನೌಕರಿ ರದ್ದಾಗಲಿದೆ. ನೌಕರಿಯಲ್ಲಿ ತಾನು ಪಡೆದ ವೇತನವನ್ನು ಹಿಂದಿರುಗಿಸಬೇಕಾಗುತ್ತದೆ.ಖಾಲಿಯಾದ ಹುದ್ದೆಗಳನ್ನು ಅರ್ಹ ಪ.ಜಾ. ಅಥವಾ ಪ.ಪಂಗಡ ಅ್ಯರ್ಥಿಗೆ ನೀಡಬೇಕು ಎಂದರು.

ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ. ಕೆ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಉಪ ವಿಬಾಗಾಧಿಕಾರಿ ಮಧುಕೇಶ್ವರ್, ಚಿಕ್ಕಮಗಳೂರು ಉಪ ವಿಬಾಗಾಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು. ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಲಲಿತಾ ಬಾಯಿ ಸ್ವಾಗತಿಸಿದರು. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News