ಪ್ರಯಾಣಿಕರಿಗೆ ಸರಕಾರದ ಸಾಧನೆಗಳ ಕುರಿತ ಪತ್ರ ನೀಡುವಂತೆ ಏರ್‌ ಲೈನ್ ‌ಗಳಿಗೆ ಸೂಚನೆ

Update: 2019-02-23 16:48 GMT

ಹೊಸದಿಲ್ಲಿ,ಫೆ.23: ನಾಗರಿಕ ವಾಯುಯಾನ ಸಚಿವಾಲಯದ ಸಾಧನೆಗಳು ಮತ್ತು ಉಪಕ್ರಮಗಳನ್ನು ಪಟ್ಟಿ ಮಾಡಿರುವ ಕೇಂದ್ರದ ಪತ್ರವನ್ನು ತಮ್ಮ ಪ್ರಯಾಣಿಕರಿಗೆ ನೀಡುವಂತೆ ದೇಶಿಯ ಮಾರ್ಗಗಳಲ್ಲಿ ಯಾನಗಳನ್ನು ನಿರ್ವಹಿಸುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ಸಚಿವಾಲಯವು ಸೂಚಿಸಿದೆ.

ಪ್ರತಿ ದಿನ ಎಷ್ಟು ಪ್ರಯಾಣಿಕರಿಗೆ ಈ ಪತ್ರವನ್ನು ನೀಡಲಾಗಿದೆ ಎನ್ನುವುದನ್ನು ತನಗೆ ತಿಳಿಸುವಂತೆಯೂ ಸಚಿವಾಲಯವು ಅವುಗಳಿಗೆ ಸೂಚಿಸಿದೆ.

ನಾಗರಿಕ ವಾಯುಯಾನ ಸಚಿವ ಸುರೇಶ ಪ್ರಭು ಅವರು ಬರೆದಿರುವ ಈ ಪತ್ರವು,ಹಾಲಿ ಆಡಳಿತವು ವಾಯುಯಾನ ಕ್ಷೇತ್ರದಲ್ಲಿ ಪರಿವರ್ತನೆಯನ್ನು ತಂದಿದೆ ಎಂದು ಹೇಳಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಡಿ ದೇಶವು ಆರ್ಥಿಕ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿಯೂ ಭಾರೀ ಪ್ರಗತಿಯನ್ನು ಸಾಧಿಸಿದೆ. ನಾವು ವಾಯುಯಾನ ಕ್ಷೇತ್ರದಲ್ಲಿ ಸಮಗ್ರ ಪರಿವರ್ತನೆಯನ್ನು ತಂದಿದ್ದು,ಇದರಿಂದಾಗಿ ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದೂ ಹೇಳಿರುವ ಪತ್ರವು,ಮುಂದಿನ ಐದು ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ಆರು ‘ವಾಟರ್‌ ಡ್ರೋಮ್’ ಗಳಿಗಾಗಿ ಬೃಹತ್ ಹೂಡಿಕೆಯ ಭರವಸೆಯನ್ನು ನೀಡಿದೆ.

 ಸರಕಾರದ ಸೂಚನೆಯನ್ನು ಪಾಲಿಸಲು ವಿಮಾನಯಾನ ಸಂಸ್ಥೆಗಳು ಬದ್ಧವಾಗಿಲ್ಲ. ನಮ್ಮ ಹೆಚ್ಚಿನ ಪ್ರಯಾಣಿಕರೂ ಇಂತಹ ಸಂದೇಶಗಳನ್ನು ನೋಡಲು ಬಯಸದಿರಬಹುದು ಎಂದು ಖಾಸಗಿ ವಿಮಾನಯಾನ ಸಂಸ್ಥೆಗಳ ಅನಾಮಿಕ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News