ಪತ್ಯೇಕತಾವಾದಿ ನಾಯಕ ಜಾಮೀನು ಅರ್ಜಿ ವಿಚಾರಣೆ: ಎಪ್ರಿಲ್ 2ಕ್ಕೆ ಮುಂದೂಡಿದ ದಿಲ್ಲಿ ನ್ಯಾಯಾಲಯ

Update: 2019-02-23 16:54 GMT

ಹೊಸದಿಲ್ಲಿ, ಫೆ. 23: ಅಕ್ರಮ ಹಣ ವರ್ಗಾವಣೆಯ ದಶಕಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಜಾಮೀನು ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಶನಿವಾರ ಎಪ್ರಿಲ್ 2ರ ವರೆಗೆ ಮುಂದೂಡಿದೆ.

 ಶಾ ಜಾಮೀನು ಮನವಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ವಿಚಾರಣೆ ನಡೆಸಿದರು.

ಶಾ ಅವರ ಜಾಮೀನು ಅರ್ಜಿಯ ಕುರಿತು ಫೆಬ್ರವರಿ 18ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದೆ.

 ಈ ಪ್ರಕರಣದ ಸಹ ಆರೋಪಿ ಹಾಗೂ ಹವಾಲಾ ವ್ಯಾಪಾರಿ ಮುಹಮ್ಮದ್ ಅಸ್ಲಾಂ ವಾನಿಗೆ ಇತ್ತೀಚೆಗೆ ದಿಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದು, ಇದೇ ರೀತಿ ತನಗೂ ಜಾಮೀನು ನೀಡುವಂತೆ ಶಬೀರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News