ಶ್ರೀನಗರಕ್ಕೆ ಅರೆ ಸೇನಾ ಪಡೆಯ 100 ತುಕಡಿ ರವಾನೆ

Update: 2019-02-23 17:01 GMT

ಶ್ರೀನಗರ, ಫೆ. 23: ಪ್ರತ್ಯೇಕತಾವಾದಿಗಳ ಮೇಲೆ ದಾಳಿ ಮುಂದುವರಿಸಿರುವ ನಡುವೆ ಕೇಂದ್ರ ಸರಕಾರ ಅರೆಸೇನಾ ಪಡೆಯ ನೂರು ಹೆಚ್ಚುವರಿ ತುಕಡಿಗಳನ್ನು ಜಮ್ಮು ಕಾಶ್ಮೀರಕ್ಕೆ ರವಾನಿಸಿದೆ.

ಗೃಹ ಸಚಿವಾಲಯದ ನೋಟಿಸಿನ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಅರೆ ಸೇನಾ ಪಡೆಯ 100 ಹೆಚ್ಚುವರಿ ಕಂಪೆನಿಗಳನ್ನು ಶ್ರೀನಗರಕ್ಕೆ ಏರ್‌ಲಿಫ್ಟ್ ಮಾಡಲಾಗಿದೆ.

ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಪ್ರತ್ಯೇಕತಾ ವಾದಿಗಳ ಮೇಲೆ ದಾಳಿ ಮುಂದುವರಿಸಿದ್ದಾರೆ.

ಈ ನಡುವೆ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಸಾವಿರಕ್ಕೂ ಅಧಿಕ ಕೇಂದ್ರ ಪೊಲೀಸ್ ಹಾಗೂ ಅರೆ ಸೇನಾ ಪಡೆಯ ಸಿಬ್ಬಂದಿಯನ್ನು ಜಮ್ಮು ಕಾಶ್ಮೀರಕ್ಕೆ ರವಾನಿಸಲಾಗಿದೆ ಹಾಗೂ ಇದು ಪತ್ಯೇಕತಾವಾದಿ ಉಗ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆರವಾಗಲಿದೆ.

 ಶುಕ್ರವಾರ ಹಾಗೂ ಶನಿವಾರದ ನಡುವೆ ರಾತ್ರಿ ಜಮ್ಮು ಹಾಗೂ ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರತ್ಯೇಕತಾವಾದಿ ಪಕ್ಷಗಳ ನಾಯಕರು, ಹೋರಾಟಗಾರರ ಮನೆಗಳಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಡೆಸಿದ ದಾಳಿಯ ಸಂದರ್ಭ ಜಮ್ಮು ಹಾಗೂ ಕಾಶ್ಮೀರದ ಪೊಲೀಸರು ನೆರವು ನೀಡಿದ್ದರು. ಬಂಧಿತರಲ್ಲಿ ಡಾ. ಅಬ್ದುಲ್ ಹಮೀದ್ ಫಯಾಝ್ ಝಾಹಿದ್ ಅಲಿ, ಮಾಜಿ ಹಾಗೂ ಸ್ಥಾನಿಕ ಪದಾಧಿಕಾರಿಗಳಾದ ಗುಲಾಂ ಖಾದರ್ ಲೋನೆ, ಅಬ್ದುರ್ ರವೂಫ್, ಮುದಸಿರ್ ಅಹ್ಮದ್, ಅಬ್ದುಲ್ ಸಲಾಂ, ಬಖ್ತ್ವಾರ್ ಅಹ್ಮದ್, ಮುಹಮ್ಮದ್ ಹಯಾತ್, ಬಿಲಾಲ್ ಅಹ್ಮದ್, ಗುಲಾಮ್ ಮುಹಮ್ಮದ್ ದಾರ್ ಹಾಗೂ ಇತರ ಸೇರಿದ್ದಾರೆ.

ಜಮ್ಮು ಹಾಗೂ ಕಾಶ್ಮೀರ ವಿಮೋಚನಾ ರಂಗದ (ಜೆಕೆಎಲ್‌ಎಫ್) ಅಧ್ಯಕ್ಷ ಯಾಸಿನ್ ಮಲ್ಲಿಕ್ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News