ಏರ್ ಇಂಡಿಯಾಕ್ಕೆ ವಿಮಾನ ಅಪಹರಣದ ಬೆದರಿಕೆ ಕರೆ

Update: 2019-02-23 18:21 GMT

 ಹೊಸದಿಲ್ಲಿ, ಫೆ. 23: ಏರ್ ಇಂಡಿಯಾದ ಮುಂಬೈ ನಿಯಂತ್ರಣ ಕೇಂದ್ರ ಶನಿವಾರ ವಿಮಾನ ಅಪಹರಣದ ಬೆದರಿಕೆ ಕರೆ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲು ನಿರ್ದಿಷ್ಟ ಕ್ರಮಗಳನ್ನು ಹೆಚ್ಚಿಸಿ ಎಂದು ಬ್ಯೂರೊ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ (ಬಿಸಿಎಎಸ್) ಎಲ್ಲಾ ವಿಮಾನ ಸಂಸ್ಥೆಗಳಿಗೆ ಹಾಗೂ ಸಿಐಎಸ್‌ಎಫ್‌ಗೆ ಆದೇಶಿಸಿದೆ.

 ‘‘ಏರ್ ಇಂಡಿಯಾದ ಮುಂಬೈ ವಿಮಾನ ನಿಲ್ದಾಣ ನಿಯಂತ್ರಣ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಟೆಲಿಫೋನ್ ಸಂದೇಶ ಬಂದಿದೆ. 23.2.2019ರಂದು ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಪಾಕಿಸ್ತಾನ ಹೈಜಾಕ್ ಮಾಡಲಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ’’ ಎಂದು ಬಿಸಿಎಎಸ್ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಎಪಿಎಸ್‌ಯು (ವಿಮಾನ ನಿಲಾಣ ಭದ್ರತಾ ಘಟಕ), ಎಎಸ್‌ಜಿ (ವೈಮಾನಿಕ ಭದ್ರತಾ ಗುಂಪು) ಹಾಗೂ ವಿಮಾನಗಳ ನಿರ್ವಾಹಕರು ಎಂಟು ಕ್ರಮಗಳನ್ನು ಕೂಡಲೇ ಅನುಸರಿಸಬೇಕು ಎಂದು ಆದೇಶಿಸಲಾಗಿದೆ.

ಎಪಿಎಸ್‌ಯು ಹಾಗೂ ಎಎಸ್‌ಜಿ ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ ಭಾಗ. ಇಂಡಿಯನ್ ಏರ್ ಏರ್ ಲೈನ್ಸ್ ಮಾತ್ರ ಏರ್ ಇಂಡಿಯಾದ ಭಾಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News