×
Ad

ಮೋದಿಯವರ ಸಂವಾದ ವಿಶ್ವದ ಅತ್ಯಂತ ದೊಡ್ಡ ವೀಡಿಯೊ ಕಾನ್ಫರೆನ್ಸ್ ಆಗಲಿದೆ: ಅಮಿತ್ ಶಾ

Update: 2019-02-24 21:38 IST

ಹೊಸದಿಲ್ಲಿ,ಫೆ.24: ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ನಡೆಸಲಿರುವ ಸಂವಾದ ಕಾರ್ಯಕ್ರಮವು ವಿಶ್ವದ ಅತ್ಯಂತ ದೊಡ್ಡ ವೀಡಿಯೊ ಕಾನ್ಫರೆನ್ಸ್ ಆಗಲಿದ್ದು, 15,000 ಸ್ಥಳಗಳಲ್ಲಿಯ ಒಂದು ಕೋಟಿಗೂ ಅಧಿಕ ಜನರೊಂದಿಗೆ ಅವರು ಮಾತನಾಡಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ರವಿವಾರ ತಿಳಿಸಿದ್ದಾರೆ.

ಜನರು ತಮ್ಮ ಪ್ರಶ್ನೆಗಳನ್ನು ನಮೋ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ‘#ಮೇರಾ ಬೂತ್ ಸಬ್‌ಸೆ ಮಝಬೂತ್’ ಹ್ಯಾಷ್‌ಟ್ಯಾಗ್ ಬಳಸಿ  ಕಳುಹಿಸಬಹುದಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News