ಬೆಂಗಳೂರಿನ ಕರಾಚಿ ಬೇಕರಿಗೆ ಮುತ್ತಿಗೆ ಪ್ರಕರಣ: 9 ಮಂದಿಯ ಬಂಧನ

Update: 2019-02-24 17:02 GMT

ಬೆಂಗಳೂರು, ಫೆ.24: ಕರಾಚಿ ಬೇಕರಿ ವಿರುದ್ಧ ಪ್ರತಿಭಟನೆ ನಡೆಸಿ ನಾಮಫಲಕದಲ್ಲಿ ಕರಾಚಿ ಎಂಬ ಶಬ್ದವನ್ನು ಮುಚ್ಚುವಂತೆ ಬಲವಂತಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಅಲಸೂರು ಮತ್ತು ಸುತ್ತಮುತ್ತಲ ಪ್ರದೇಶದವರು. ಬಂಧಿತರನ್ನು ಬಾಲಾಜಿ, ಶ್ರೀಹರಿ, ಪ್ರವೀಣ, ಶ್ರೀಯಪ್ಪ, ಶಿವಕುಮಾರ, ಗುಣಶೇಖರ, ಲಕ್ಷ್ಮಣ್, ಸಂಜಯ್ ಮತ್ತು ನವೀನ್ ಎಂದು ಗುರುತಿಸಲಾಗಿದ್ದು, ಎಲ್ಲರೂ 30-35 ವರ್ಷದವರು. ಆರೋಪಿಗಳ ವಿರುದ್ಧ ದೊಂಬಿ ಹಾಗೂ ವಿಶ್ವಾಸ ಉಲ್ಲಂಘನೆಯ ಅಪರಾಧ ಹೊರಿಸಲಾಗಿದೆ.

ಖಣಚಂದ್ ರಾಮನಾನಿ ಎಂಬವರು 1953ರಲ್ಲಿ ಕರಾಚಿ ಬೇಕರಿಯನ್ನು ಹೈದರಾಬಾದ್‍ ನಲ್ಲಿ ಆರಂಭಿಸಿದ್ದರು. ಇವರು ದೇಶ ವಿಭಜನೆ ಸಂದರ್ಭದಲ್ಲಿ ಕರಾಚಿಯಿಂದ ವಲಸೆ ಬಂದವರು. ಆ ಬಳಿಕ ಇದು ದೇಶವ್ಯಾಪಿ ಫ್ರಾಂಚೈಸಿಯಾಗಿ ಬೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News