×
Ad

ಅಸ್ಸಾಂ ಕಳ್ಳಭಟ್ಟಿ ಪ್ರಕರಣ: ಸಾವಿನ ಸಂಖ್ಯೆ 127ಕ್ಕೆ ಏರಿಕೆ

Update: 2019-02-25 22:28 IST

ಅಸ್ಸಾಂ, ಫೆ. 25: ಅಸ್ಸಾಂನಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧ ಆಸ್ವತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 200ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಗೋಲಾಘಾಟ್ ಹಾಗೂ ಜೊರ್ಹಾತ್‌ನಲ್ಲಿ ಅತ್ಯಧಿಕ ಸಾವು ಸಂಭವಿಸಿದೆ.

 ಹೆಚ್ಚಿನ ಸಂತ್ರಸ್ತರು ಗೋಲಾಘಾಟ್ ಹಾಗೂ ಜೋರ್ಹಾತ್ ಜಿಲ್ಲೆಗಳ ಚಹಾ ತೋಟದ ಬಡ ಕೂಲಿ ಕಾರ್ಮಿಕರು. ಗುರುವಾರ ಕಳ್ಳಭಟ್ಟಿ ಸೇವಿಸಿ ದೊಡ್ಡ ಸಂಖ್ಯೆಯ ಕಾರ್ಮಿಕರು ಮೃತಪಟ್ಟಿದ್ದಾರೆ. ಅದೇ ದಿನ ರಾತ್ರಿ 12 ಮಂದಿ ಕಾರ್ಮಿಕರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News