ಪ್ರಚಾರದ ವೇಳೆ ನನ್ನನ್ನು ಟ್ರಂಪ್ ಚುಂಬಿಸಿದ್ದರು: ಮಹಿಳೆಯ ಆರೋಪ

Update: 2019-02-26 17:10 GMT

ವಾಶಿಂಗ್ಟನ್, ಫೆ. 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2016ರ ಆಗಸ್ಟ್‌ನಲ್ಲಿ ಫ್ಲೋರಿಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರ ಮೊದಲು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನನ್ನು ಚುಂಬಿಸಿದ್ದಾರೆ ಎಂದು ಅವರ ಪ್ರಚಾರ ತಂಡದಲ್ಲಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಈ ಸಂಬಂಧ ಅವರು ಟ್ರಂಪ್ ವಿರುದ್ಧ ಮೊಕದ್ದಮೆಯೊಂದನ್ನು ಹೂಡಿದ್ದಾರೆ.

“ತುಟಿಗೆ ಚುಂಬಿಸಲು ಟ್ರಂಪ್ ನನ್ನತ್ತ ಬಾಗಿದಾಗ ನಾನು ಮುಖವನ್ನು ತಿರುಗಿಸಿದೆ, ಆಗ ಅವರು ನನ್ನ ಬಾಯಿಯ ಮೂಲೆಗೆ ಚುಂಬಿಸಿದರು” ಎಂದು ಆ್ಯಲ್ವಾ ಜಾನ್ಸನ್ ಹೇಳಿದ್ದಾರೆ.

‘‘ಅದು ನನ್ನ ಮೇಲೆ ನಡೆದ ಅತಿಕ್ರಮಣವಾಗಿತ್ತು. ನಾನು ಅದನ್ನು ನಿರೀಕ್ಷಿಸಿಯೂ ಇರಲಿಲ್ಲ, ಬಯಸಿಯೂ ಇರಲಿಲ್ಲ’’ ಎಂದು ಅವರು ‘ವಾಶಿಂಗ್ಟನ್ ಪೋಸ್ಟ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News