ಎಲ್ಲ ದೇಶಗಳ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಗೌರವಿಸಿ: ಪಾಕಿಸ್ತಾನಕ್ಕೆ ಚೀನಾ ಬುದ್ಧಿ ಮಾತು

Update: 2019-02-28 16:03 GMT

ಬೀಜಿಂಗ್, ಫೆ. 28: ಎಲ್ಲ ದೇಶಗಳ ಸಾರ್ವಭೌಮತ್ವ ಮತ್ತು ಪಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಚೀನಾ ವಿದೇಶ ಸಚಿವ ವಾಂಗ್ ಯಿ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿಗೆ ಹೇಳಿದ್ದಾರೆ.

ಕುರೇಶಿ ತಡರಾತ್ರಿ ಮಾಡಿದ ‘ತುರ್ತು’ ಫೋನ್ ಕರೆಯೊಂದಕ್ಕೆ ಪ್ರತಿಕ್ರಿಯಿಸಿದ ವಾಂಗ್, ಎಲ್ಲ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಸ್ವಷ್ಟಪಡಿಸಿದರು ಎಂದು ಚೀನಾದ ವಿದೇಶ ಸಚಿವಾಲಯ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.

‘‘ಅಂತರ್‌ರಾಷ್ಟ್ರೀಯ ಸಂಬಂಧದ ನಿಯಮಗಳನ್ನು ಉಲ್ಲಂಘಿಸುವ ಕೃತ್ಯಗಳನ್ನು ಚೀನಾ ಪರಿಗಣಿಸುವುದಿಲ್ಲ’’ ಎಂದು ವಾಂಗ್‌ರನ್ನು ಉಲ್ಲೇಖಿಸಿ ಹೇಳಿಕೆ ತಿಳಿಸಿದೆ.

ಬುಧವಾರ ಬೆಳಗ್ಗೆ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆದಿದೆ.

ಪಾಕಿಸ್ತಾನದ ಉಲ್ಲಂಘನೆಯು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ನಡೆಸಿದ ವಿಫಲ ಪ್ರಯತ್ನವಾಗಿದೆ ಎಂಬುದಾಗಿ ಭಾರತ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News