ಐಎಫ್ ಪೈಲಟ್‌ನ ವೀಡಿಯೊ ಲಿಂಕ್ ಅಳಿಸಲು ಯೂಟ್ಯೂಬ್‌ಗೆ ಐಟಿ ಸಚಿವಾಲಯ ನಿರ್ದೇಶ

Update: 2019-02-28 16:57 GMT

ಹೊಸದಿಲ್ಲಿ, ಫೆ. 28: ಬುಧವಾರ ವೈಮಾನಿಕ ಸಮರದ ಸಂದರ್ಭ ಪಾಕಿಸ್ತಾನ ಸೇನೆಯಿಂದ ಸೆರೆ ಹಿಡಿಯಲ್ಪಟ್ಟ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಸಂಬಂಧಿಸಿದ 11 ವೀಡಿಯೊ ಲಿಂಕ್‌ಗಳನ್ನು ಅಳಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಯೂಟ್ಯೂಬ್‌ಗೆ ನಿರ್ದೇಶಿಸಿದೆ.

ಗೃಹ ಸಚಿವಾಲಯದ ಆದೇಶದ ಹಿನ್ನೆಲೆಯಲ್ಲಿ ವೀಡಿಯೊ ದೃಶ್ಯಗಳನ್ನು ಅಳಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಯೂಟ್ಯೂಬ್‌ಗೆ ಸೂಚಿಸಿದೆ. ಅದರಂತೆ ಯೂಟ್ಯೂಬ್ ಈ ದೃಶ್ಯಗಳನ್ನು ಅಳಿಸಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಸುದೀರ್ಘ ಕಾಲದ ನೀತಿಗೆ ಅನುಗುಣವಾಗಿ ಸರಕಾರದಿಂದ ಮೌಲ್ಯಯುತ ಕಾನೂನಾತ್ಮಕ ಮನವಿಯನ್ನು ಎಷ್ಟು ಸಾಧ್ಯವೊ ಅಷ್ಟು ಅನುಸರಿಸಲಾಗುವುದು ಹಾಗೂ ಆ ದೃಶ್ಯವನ್ನು ಕೂಡಲೇ ಅಳಿಸಲಾಗಿದೆ ಎಂದು ಗೂಗಲ್ (ಯು ಟ್ಯೂಬ್ ಅನ್ನು ನಿರ್ವಹಿಸುತ್ತಿರುವ) ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News