ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸಲು ಬ್ರಿಟನ್ ಯತ್ನ

Update: 2019-03-01 15:17 GMT

ಲಂಡನ್, ಮಾ. 1: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಬ್ರಿಟನ್ ವಿಶ್ವಸಂಸ್ಥೆಯಲ್ಲಿ ಎಡೆಬಿಡದ ಮಾತುಕತೆಯಲ್ಲಿ ತೊಡಗಿದೆ. ಅದೇ ವೇಳೆ, ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಫ್ರಾನ್ಸ್ ಮತ್ತು ಅಮೆರಿಕಗಳೊಂದಿಗೆ ಕೈಜೋಡಿಸಿದೆ.

ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನೆರವು ನೀಡುವುದಕ್ಕಾಗಿ ರಾಜತಾಂತ್ರಿಕ, ಸೇನಾ ಮತ್ತು ಇತರ ಮಾರ್ಗಗಳ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಬ್ರಿಟನ್ ವಿದೇಶ ಕಚೇರಿಯ ಕಾರ್ಯದರ್ಶಿ ಮಾರ್ಕ್ ಫೀಲ್ಡ್ ಬ್ರಿಟನ್ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ಗೆ ತಿಳಿಸಿದರು.

ಭಾರತ-ಪಾಕ್ ಉದ್ವಿಗ್ನತೆಯ ಬಗ್ಗೆ ಪ್ರಧಾನಿ ತೆರೇಸಾ ಮೇ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಮೂಲಗಳ ಹಲವಾರು ಸಂಸದರು ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News