ಫಿಫಾ ಕೌನ್ಸಿಲ್ ಸದಸ್ಯಚುನಾವಣೆ: ಪಟೇಲ್ ಸ್ಪರ್ಧೆ
Update: 2019-03-01 23:39 IST
ಹೊಸದಿಲ್ಲಿ,ಮಾ.1: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ಅಧ್ಯಕ್ಷ ಪ್ರಫುಲ್ ಪಟೇಲ್ ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ)ನಿಂದ ಆರು ಫಿಫಾ ಕೌನ್ಸಿಲ್ ಸದಸ್ಯತ್ವಕ್ಕಾಗಿ ಎ.6 ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಚುನಾವಣೆಯು 2019-2023ರ ಅವಧಿಗಾಗಿ ನಡೆಯಲಿದ್ದು, ಮಲೇಶ್ಯಾದ ಕೌಲಾಲಂಪುರದಲ್ಲಿ ನಡೆಯುವ 29ನೇ ಎಎಫ್‌ಸಿ ಸಮಾವೇಶದಲ್ಲಿ ಎಲೆಕ್ಷನ್ ನಡೆಯಲಿದೆ. 2018ರ ಡಿ.6 ಸದಸ್ಯ ಸಂಸ್ಥೆಗಳು ತಮ್ಮ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದಿತ್ತು.