×
Ad

100ನೇ ಪ್ರಶಸ್ತಿ: ಫೆಡರರ್‌ಗೆ ಎರಡೇ ಮೆಟ್ಟಿಲು

Update: 2019-03-01 23:40 IST

ದುಬೈ, ಮಾ.1: ತಮ್ಮ ಟೆನಿಸ್ ವೃತ್ತಿಜೀವನದ 100ನೇ ಪ್ರಶಸ್ತಿ ಜಯಿಸಲು ಸ್ವಿಸ್ ತಾರೆ ರೋಜರ್ ಫೆಡರರ್‌ಗೆ ಎರಡೇ ಹಂತ ಬಾಕಿ ಇದೆ. ಗುರುವಾರ ನಡೆದ ದುಬೈ ಓಪನ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಂಗೇರಿಯದ ಮಾರ್ಟೊನ್ ಫಸ್ಕೊವಿಕ್ಸ್ ಅವರನ್ನು 7-6(8-6), 6-4 ಸೆಟ್‌ಗಳಿಂದ ಮಣಿಸಿದ ಫೆಡರರ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

7 ಬಾರಿಯ ಚಾಂಪಿಯನ್ ಆಗಿರುವ ಫೆಡರರ್ ವಿಪರೀತ ಗಾಳಿ ಹಾಗೂ ಜಿಟಿ ಜಿಟಿ ಮಳೆಯ ನಡುವೆಯೂ ಕಠಿಣ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. 20 ಬಾರಿಯ ಗ್ರಾನ್‌ಸ್ಲಾಮ್ ವಿಜೇತ ಫೆಡರರ್ ತಮ್ಮ ಮುಂದಿನ ಪಂದ್ಯದಲ್ಲಿ ಕ್ರೊಯೇಶ್ಯದ ಬಾರ್ನಾ ಕೊರಿಕ್ ಅಥವಾ ಜಾರ್ಜಿಯಾ ನಿಕೊಲಾಝ್ ಬಾಸಿಲಾಶ್ವಿಲಿ ಅವರನ್ನು ಎದುರಿಸಲಿದ್ದಾರೆ.

ಗುರುವಾರ ಬೆಳಗ್ಗೆ ನಡೆದ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸ್ಟೆಫನೋಸ್ ಟಿಟ್ಸಿಪಾಸ್ ಅವರು ಹ್ಯುಬರ್ಟ್ ಹರ್ಕಝ್ ಅವರನ್ನು 7-6(7-4), 6-7(1/7), 6-1 ಸೆಟ್‌ಗಳಿಂದ ಸೋಲಿಸಿದರು. ಅವರು ತಮ್ಮ ಮುಂದಿನ ಪಂದ್ಯದಲ್ಲಿ ಗೇಲ್ ಮೊನ್‌ಫಿಲ್ಸ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ ಫ್ರಾನ್ಸ್‌ನ ಮೊನ್‌ಫಿಲ್ಸ್ ಅವರು ಕ್ವಾಲಿಫೈಯರ್ ಆಟಗಾರ ರಿಕಾರ್ಡಸ್ ಬೆರಂಕಿಸ್ ಅವರನ್ನು ಪ್ರಬಲ ಹೋರಾಟ ಕಂಡುಬಂದ ಪಂದ್ಯದಲ್ಲಿ 6-1, 6-7(3/7), 6-2 ಸೆಟ್‌ಗಳಿಂದ ಬಗ್ಗುಬಡಿದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News