ಐಜಿಐ ಕ್ರೀಡಾಂಗಣಕ್ಕೆ ಮೊದಲ ಬಾರಿ ಇಂಡಿಯಾ ಓಪನ್ ಆತಿಥ್ಯ
ಹೊಸದಿಲ್ಲಿ, ಮಾ.1: ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ದಿಲ್ಲಿಯ ಇಂದಿರಾಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣವು(ಐಜಿಐ) 9ನೇ ಆವೃತ್ತಿಯ ವಿಶ್ವ ಟೂರ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಆತಿಥ್ಯ ವಹಿಸಲು ಸಜ್ಜಾಗಿದೆ. ಟೂರ್ನಿಯು ಮಾರ್ಚ್ 26ರಿಂದ 31ರ ವರೆಗೆ ನಡೆಯಲಿದೆ.
ರಾಜಧಾನಿಯು ವ್ಯಾವಹಾರಿಕವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದು ಎಂಟು ವರ್ಷಗಳ ಬಳಿಕ ಸುಮಾರು 2 ಕೋಟಿ 48 ಲಕ್ಷ ರೂ. ಪ್ರಶಸ್ತಿ ಮೊತ್ತದ ಬ್ಯಾಡ್ಮಿಂಟನ್ ಟೂರ್ನಿಯು ದಿಲ್ಲಿಯ ಐಜಿಐಗೆ ಮರಳುತ್ತಿದೆ.
ಈ ಟೂರ್ನಿಯ ಈ ಹಿಂದಿನ ಆವೃತಿಯೂ ದಿಲ್ಲಿಯ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದಿತ್ತು. ಇಂದಿರಾಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣವು 1982ರ ಏಶ್ಯನ್ ಗೇಮ್ಸ್ ಹಾಗೂ ಇತ್ತೀಚೆಗೆ ಎಐಬಿಎ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಂತಹ ಟೂರ್ನಿಗಳನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ.
ಟೂರ್ನಿಯ ಎಲ್ಲ ಪಂದ್ಯಗಳು ಐಜಿಐ ಕ್ರೀಡಾಂಗಣದಲ್ಲಿ ಇರುವ ಕೆ.ಡಿ.ಜಾಧವ್ ಒಳಾಂಗಣ ಹಾಲ್‌ನಲ್ಲಿ ನಡೆಯಲಿವೆ.