ಮೊದಲ ಏಕದಿನ: ಭಾರತಕ್ಕೆ 237 ರನ್ ಗುರಿ

Update: 2019-03-02 11:42 GMT

ಹೈದರಾಬಾದ್, ಮಾ.2: ವೇಗದ ಬೌಲರ್ ಮುಹಮ್ಮದ್ ಶಮಿ(2-44) ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತ ತಂಡ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 7 ವಿಕೆಟ್ ನಷ್ಟಕ್ಕೆ 236 ರನ್‌ಗೆ ನಿಯಂತ್ರಿಸಿತು. ಗೆಲ್ಲಲು ಸಾಧಾರಣ ಮೊತ್ತ ಪಡೆಯಿತು.

 ಟಾಸ್ ಜಯಿಸಿದ ಆಸೀಸ್ ನಾಯಕ ಆ್ಯರೊನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಉಸ್ಮಾನ್ ಖ್ವಾಜಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಫಿಂಚ್ 2ನೇ ಓವರ್‌ನ 3ನೇ ಎಸೆತದಲ್ಲಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು.

ಆಗ ಸ್ಟೋನಿಸ್(37) ಜೊತೆ ಕೈಜೋಡಿಸಿದ ಖ್ವಾಜಾ(50,76 ಎಸೆತ, 5 ಬೌಂಡರಿ, 1 ಸಿಕ್ಸರ್)ಎರಡನೇ ವಿಕೆಟ್‌ಗೆ 87 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ಕೇದಾರ್ ಜಾಧವ್ ಬೇರ್ಪಡಿಸಿದರು.

ಟ್ವೆಂಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 51 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ಏಳನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದ ವಿಕೆಟ್‌ಕೀಪರ್ ಅಲೆಕ್ಸ್ ಕಾರೆ(ಔಟಾಗದೆ 36) ಹಾಗೂ ಕೌಲ್ಟರ್ ನೀಲ್(28)ತಂಡದ ಮೊತ್ತವನ್ನು 236ಕ್ಕೆ ತಲುಪಿಸಿದರು. ಭಾರತದ ಪರ ಶಮಿ, ಕುಲದೀಪ್ ಯಾದವ್(2-46)ಹಾಗೂ ಜಸ್‌ಪ್ರೀತ್ ಬುಮ್ರಾ(2-60) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News