ಕುಂಜತ್ತೂರು : ಅಲ್ ಮದ್ರಸತುಲ್ ಜಲಾಲಿಯ್ಯ ನೂತನ ಮದ್ರಸ ಕಟ್ಟಡ, ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ

Update: 2019-03-03 15:05 GMT

ಮಂಜೇಶ್ವರ, ಮಾ. 3: ಕುಂಜತ್ತೂರು ಹೈಸ್ಕೂಲ್ ರಸ್ತೆ ಹಾಗೂ ಪದವು ರಸ್ತೆಯ ಮಧ್ಯ ಭಾಗದಲ್ಲಿ ಜಲಾಲಿಯ್ಯ ಮಸೀದಿ ಸಮಿತಿಯ ಆಶ್ರಯದಲ್ಲಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಅಲ್ ಮದ್ರಸತುಲ್ ಜಲಾಲಿಯ್ಯ ಇದರ ನೂತನ ಮದ್ರಸ ಕಟ್ಟಡಕ್ಕೆ ಹಾಗೂ ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ ರವಿವಾರ ಸಂಜೆ ನೆರವೇರಿತು.

ನೂತನ ಮದ್ರಸ ಕಟ್ಟದದ ಶಂಕುಸ್ಥಾಪನೆಯನ್ನು ಕೆ ಎಸ್ ಅಲಿ ತಂಙಳ್ ಕುಂಬೋಲ್ ನೆರವೇರಿಸಿದರು. ಜಲಾಲಿಯ ಮಸೀದಿ ನೂತನ ವಸತಿ ಸಮುಚ್ಚಯ ಶಂಕುಸ್ಥಾಪನೆಯನ್ನು ಅತ್ತಾವುಲ್ಲ ತಂಙಳ್ ಎಂ ಎ. ಉದ್ಯಾವರ  ನೆರವೇರಿಸಿದರು.

ಬಳಿಕ ಜಲಾಲಿಯ್ಯ ಮಸೀದಿ ಹಾಗೂ ಮದ್ರಸ ಕಮಿಟಿ ಅಧ್ಯಕ್ಷ ಎ ಆರ್ ಅಬ್ದುಲ್ ರಹ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೆ ಎಸ್ ಅಲಿ ತಂಙಳ್ ಕುಂಬೋಲ್ ಉದ್ಘಾಟಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಉದ್ಯಾವರ ಜಮಾಅತ್ ಖತೀಬ್ ಅಬ್ದುಲ್ ಕರೀಂ ದಾರಿಮಿ, ಪೊಸೋಟ್ ಖತೀಬ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ , ಡಾ. ಎ ಖಾದರ್, ಸೂಫಿ ಹಾಜಿ, ಹರ್ಷಾದ್ ವರ್ಕಾಡಿ, ತೌಸೀಫ್ ಆಹ್ಮದ್ ಹನೀಫಿ, ಎಂ ಪಿ ಇಬ್ರಾಹಿಂ ಫೈಝಿ, ಮೊಹಮ್ಮದ್ ಫೈಝಿ, ಸಿದ್ದೀಖ್ ಫೈಝಿ, ಅಬ್ದುಲ್ ರಹ್ಮಾನ್ ಹರ್ಶಿದಿ, ಮೊಯಿದೀನ್ ಕುಂಞಿ ಹಾಜಿ ಪ್ರಿಯಾ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಂಗವಾಗಿ ಎರಡು ದಿನಗಳ ಧಾರ್ಮಿಕ ಬಾಷಣ ಸೋಮವಾರ ಸಮಾಪ್ತಿಗೊಳ್ಳಲಿದೆ. ಹಾಶಿರ್ ಅಲ್ ಹಾಮಿದಿ ಸ್ವಾಗತಿಸಿ, ಬಶೀರ್ ಐ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News