ಅಕ್ರಮ ಮದ್ಯ ಸಾಗಾಟ: ಬಾರ್ ಮಾಲಕ ಸೆರೆ

Update: 2019-03-03 16:08 GMT

ಅಮಾಸೆಬೈಲು, ಮಾ.3: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಬಾರ್ ಮಾಲಕನೊಬ್ಬನನ್ನು ಅಮಾಸೆಬೈಲು ಪೊಲೀಸರು ಮಾ.3ರಂದು ಬೆಳಗ್ಗೆ ಹೊಸಂಗಡಿ ಗ್ರಾಮ ಪಂಚಾಯತ್ ರಸ್ತೆಯಲ್ಲಿ ಬಂಧಿಸಿದ್ದಾರೆ.

ಅಜ್ರಿ ಗ್ರಾಮದ ಮಾವಿನಮಕ್ಕಿಯ ಸುಧಾಕರ ಶೆಟ್ಟಿ(49) ಬಂಧಿತ ಆರೋಪಿ. ಈತ ಮದ್ಯದ ಪ್ಯಾಕ್‌ಗಳನ್ನು ಬೇರೆ ಬಾರ್‌ನಲ್ಲಿ ಖರೀದಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಆರೋಪಿಯಿಂದ ಮದ್ಯವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News