ತಕ್ಷಣ ಜಿಲ್ಲಾ ಮರಳು ಸಮಿತಿ ಸಭೆ ಕರೆಯಲು ಜಿಲ್ಲಾಧಿಕಾರಿಗೆ ಶಾಸಕ ರಘುಪತಿ ಭಟ್ ಆಗ್ರಹ

Update: 2019-03-04 17:49 GMT

ಉಡುಪಿ, ಮಾ.4: ಜಿಲ್ಲೆಯ ನಾನ್‌ಸಿಆರ್‌ಝಡ್ ಪ್ರದೇಶದಲ್ಲಿ 7.80 ಲಕ್ಷ ಮೆಟ್ರಿಕ್ ಟನ್ ಮರಳುಗಾರಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮಾತ್ರವಲ್ಲದೇ ರಾಜ್ಯದ ಕೆಎಸ್‌ಸಿಝಡ್‌ಎಂ ಪರಿಸರ ಸಮಿತಿಯಿಂದಲೂ ಮಂಜೂರಾತಿ ದೊರೆತಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಆದ್ದರಿಂದ ಉಡುಪಿ ಜಿಲ್ಲಾಧಿಕಾರಿಗಳು ತಕ್ಷಣ ಏಳು ಸದಸ್ಯರ ಜಿಲ್ಲಾ ಮರಳು ಸಮಿತಿಯ ಸದಸ್ಯರ ಸಭೆಯನ್ನು ಕರೆದು ಮರಳು ವಿತರಣೆಗೆ ಬೇಕಾದ ಕ್ರಮವನ್ನು ಈ ಕೂಡಲೇ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಯಾದರೆ ಅನುಮತಿ ನೀಡಲು ಮತ್ತಷ್ಟು ಸಮಸ್ಯೆ ಆಗಬಹುದೆಂಬ ನಿಟ್ಟಿನಲ್ಲಿ ನಾಳೆ ಅಂದರೆ ಮಂಗಳವಾರವೇ ಸಭೆ ಕರೆದು ಮರಳುಗಾರಿಕೆಗೆ ಅನುಮತಿ ನೀಡಬೇಕು ಹಾಗೂ ಜಿಲ್ಲೆಯಲ್ಲಿ ಬಡ ಜನರು ಮರಳು ದೊರೆಯದೇ ಅನುಭವಿಸುತ್ತಿರುವ ಕಷ್ಟವನ್ನು ದೂರಮಾಡಬೇಕು ಎಂಬ ಉದ್ದೇಶದಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ರಘುಪತಿ ಭಟ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News