ವಿಟ್ಲ: ಐದು ಕಡೆ ಅಕ್ರಮ ಮದ್ಯದಂಗಡಿ ಮೇಲೆ ಪೊಲೀಸ್ ದಾಳಿ

Update: 2019-03-04 18:22 GMT

ವಿಟ್ಲ: ವಿಟ್ಲ ಠಾಣಾ ವ್ಯಾಪಿಯ ಐದು ಕಡೆಗಳಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಭಾನುವಾರ ನಡೆದಿದೆ.

ಕುಳ ಗ್ರಾಮದ ಅಳಿಕೆಮಜಲು ಎಂಬಲ್ಲಿ ಶೇಖರ ಪೂಜಾರಿ ಎಂಬರಿಗೆ ಸೇರಿದ ಅಂಗಡಿಗೆ ದಾಳಿ ನಡೆದಿದೆ. 720 ಎಂ ಎಲ್ ಬಾಟ್ಲಿ ಸೇರಿ ಹಲವು ವಸ್ತುಗಳ ಸಹಿತವಾಗಿ ಅಂಗಡಿ ಮಾಲಕನನ್ನು ವಶಕ್ಕೆ ಪಡೆಯಲಾಗಿದೆ. 

ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಅಣ್ಣು ಪೂಜಾರಿ ಎಂಬರಿಗೆ ಸೇರಿದ ಅಂಗಡಿಗೆ ದಾಳಿ ನಡೆಸಲಾಗಿದೆ. 180 ಎಂ ಎಲ್ ಎರಡು ಬಾಟ್ಲಿ, 90 ಎಂ ಎಲ್ ನಾಲ್ಕು ಬಾಟ್ಲಿ ಸಹಿತವಾಗಿ ಮಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕರೋಪಾಡಿ ಗ್ರಾಮದ ಸಮಡ್ಕ ಎಂಬಲ್ಲಿ ಆನಂದ ಬೆಳ್ಚಾಡ ಅವರ ಅಂಗಡಿಗೆ ದಾಳಿ ನಡೆಸಿದ್ದು, 180 ಎಂ ಎಲ್ ಬಾಟ್ಲಿ ಮಧ್ಯ ಸಹಿತವಾಗಿ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ವೀರಕಂಬ ಗ್ರಾಮದ ಮಂಗಿಲಪದವು ತಿಮ್ಮಪ್ಪ ಗೌಡ ಅವರಿಗೆ ಸೇರಿದ ಹಾಗೂ ಮಂಗಿಲಪದವು ಲಕ್ಷ್ಮಣ ಗೌಡ ಎಂಬರಿಗೆ ಸೇರಿದ ಅಂಗಡಿಗಳಿಗೆ ದಾಳಿ ನಡೆಸಲಾಗಿದೆ. ಮದ್ಯ ಬಾಟಲ್ ಸಹಿತವಾಗಿ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News