ಸಕಲ ಸರಕಾರಿ ಗೌರವಗಳೊಂದಿಗೆ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಅಂತ್ಯಕ್ರಿಯೆ

Update: 2019-03-05 14:21 GMT

ಬೆಳ್ತಂಗಡಿ: ಸೋಮವಾರ ನಿಧನರಾದ ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಸಚಿವ ವಿ ಧನಂಜಯಕುಮಾರ್ ಅವರ ಹುಟ್ಟೂರಾದ ಬೆಳ್ತಂಗಡಿ ತಾಲೂಕಿನ ವೇಣೂರಿನ ಅವರ ಕುಟುಂಬದ ಮನೆಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. 

ಬೆಳಿಗ್ಗೆ 11.50 ಕ್ಕೆ ಅವರ ಪಾರ್ಥಿವ ಶರೀರ ವೇನೂರು ತಲುಪಿತ್ತು, ನಗರದಲ್ಲಿ ಮರವಣಿಗೆ ನಡೆದು ಬಳಿಕ ಶ್ರೀ ಪಾಶ್ರ್ವನಾಧ ಬಸದಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ಅವರ ಪಂಜಾಲುಬೈಲು ಮನೆಗೆ ತರಲಾಯಿತು. ಜೈನ ಸಮುದಾಯದ ಸಂಪ್ರದಾಯಗಳಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಕೆ.ವಸಂತ ಬಂಗೇರ, ಕೆ. ಅಭಯಚಂದ್ರ ಜೈನ್, ದ.ಕ ಜಿಲ್ಲಾ ಪೋಲೀಸ್ ಅಧೀಕ್ಷಕ ಬಿ.ಎಂ ಲಕ್ಷ್ಮೀಪ್ರಸಾದ್, ಸಹಾಯಕ ಅಧೀಕ್ಷಕ ಸೈದುಲ್ಲಾ ಅದಾತ್, ಪುತ್ತೂರು ಸಹಾಯಕ ಕಮೀಷನರ್ ಡಾ. ಹೆಚ್,ಸಿ ಕೃಷ್ಣಮೂರ್ತಿ, ಡಾ. ಎಂ ಮೋಹನ ಆಳ್ವ, ಡಿ ಹರ್ಷೇಂದ್ರ ಕುಮಾರ್, ಡಾ. ಯಶೋವರ್ಮ, ಗಣೇಶ್ ಕಾರ್ಣಿಕ್, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ವೃತ್ತನಿರೀಕ್ಷಕ ಸಂದೇಶ್ ಪಿ,ಜಿ, ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಪ್ರತಾಪಸಿಂಹ ನಾಯಕ್, ಹಾಗೂ ಇತರರು ಇದ್ದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News