ದ.ಕ. ಜಿಲ್ಲೆಯಲ್ಲಿ ಮಾ.10ರಂದು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ

Update: 2019-03-06 11:57 GMT

ಮಂಗಳೂರು, ಮಾ.6: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ.10ರಂದು 922 ಕೇಂದ್ರಗಳಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹಾಲಿ ಇರುವ 5 ತಾಲೂಕುಗಳಲ್ಲಿ 0-5 ವರ್ಷದೊಳಗಿನ 1,49,562 ಮಕ್ಕಳನ್ನು ಗುರುತಿಸಲಾಗಿದೆ. ಮಾರ್ಚ್ 10ರಂದು ಸಾರ್ವತ್ರಿಕ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಬೂತ್ ಗಳ ಜೊತೆಗೆ 7 ಮೊಬೈಲ್  ತಂಡ, 26 ಟ್ರಾನ್ಸಿಟ್  ತಂಡಗಳು ಕಾರ್ಯ ನಿರ್ವಹಿಸಲಿದೆ ಹಾಗೂ ಮಾ.11,12ರಂದು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮ ನಡೆಯಲಿದೆ.

ನಗರ ಪ್ರದೇಶದಲ್ಲಿ ಮಾ.13ರಂದು ಪಲ್ಸ್ ಪೋಲಿಯೋ ನಡೆಯಲಿದೆ. ಈ ವರ್ಷ ಒಂದು ಬಾರಿ ಮಾತ್ರ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ನಿರೋಧಕ ಹನಿ ಹಾಕಿಸುವ ಅಗತ್ಯವಿದೆ. ಈ ಬಗ್ಗೆ ತಪ್ಪು ಕಲ್ಪನೆ ಬೇಡ. ಜಿಲ್ಲೆಯಲ್ಲಿ 1999ರಿಂದ ಯಾವುದೇ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ ಎಂದು ರಾಮಕೃಷ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News