ಅಮೆರಿಕದ ಸಿಸ್ಕೊ ಸಿಸ್ಟಮ್ಸ್‌ಗೆ 65 ಕೋಟಿ ರೂ. ವಂಚನೆ: ಭಾರತ ಮೂಲದ ಮಾಜಿ ಉದ್ಯೋಗಿ ಬಂಧನ

Update: 2019-03-06 15:46 GMT

ನ್ಯೂಯಾರ್ಕ್, ಮಾ. 6: ಅಮೆರಿಕದ ತಂತ್ರಜ್ಞಾನ ಸಂಸ್ಥೆ ಸಿಸ್ಕೊ ಸಿಸ್ಟಮ್ಸ್‌ಗೆ 9.3 ಮಿಲಿಯ ಡಾಲರ್ (ಸುಮಾರು 65 ಕೋಟಿ ರೂಪಾಯಿ)ಗೂ ಅಧಿಕ ಮೊತ್ತವನ್ನು ವಂಚಿಸಿದ ಆರೋಪದಲ್ಲಿ ಭಾರತ ಮೂಲದ ಮಾಜಿ ಉದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ.

50 ವರ್ಷದ ಪೃಥ್ವಿರಾಜ್ ಭಿಖಾ ವಿರುದ್ಧ ಆಧುನಿಕ ತಂತ್ರಜ್ಞಾನ ಬಳಸಿ ವಂಚನೆ ಮಾಡಿದ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಮೆರಿಕದ ಅಟಾರ್ನಿ ಡೇವಿಡ್ ಆ್ಯಂಡರ್‌ಸನ್ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಸ್ಪೆಶಲ್ ಏಜಂಟ್ ಜಾನ್ ಬೆನೆಟ್ ಹೇಳಿದ್ದಾರೆ.

ಪೃಥ್ವಿರಾಜ್‌ನನ್ನು ಮಾರ್ಚ್ 1ರಂದು ಸಾನ್‌ಫ್ರಾನ್ಸಿಸ್ಕೊ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಆತನನ್ನು ಸೋಮವಾರ ಫೆಡರಲ್ ನ್ಯಾಯಾಧೀಶರೊಬ್ಬರ ಸಮ್ಮುಖದಲ್ಲಿ ಹಾಜರುಪಡಿಸಿದಾಗ, ನ್ಯಾಯಾಲಯವು ಆತನನ್ನು 3 ಮಿಲಿಯ ಡಾಲರ್ (ಸುಮಾರು 21 ಕೋಟಿ ರೂಪಾಯಿ) ಮೊತ್ತದ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತು.

ಸಾನ್‌ಫ್ರಾನ್ಸಿಸ್ಕೊ ನಿವಾಸಿ ಭಿಖಾ 2017ರ ಮಧ್ಯ ಭಾಗದವರೆಗೆ ಸಿಸ್ಕೊದಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು.

2013ರಲ್ಲಿ ಸಿಸ್ಕೊ ಆರಂಭಿಸಿದ ನೂತನ ಯೋಜನೆಯೊಂದಕ್ಕಾಗಿ ಭಿಖಾ ವಿದೇಶಗಳಲ್ಲಿ ತನ್ನದೇ ಆದ ವ್ಯಾಪಾರಿ ಸಂಸ್ಥೆಗಳನ್ನು ಸ್ಥಾಪಿಸಿದರು ಹಾಗೂ ಈ ಯೋಜನೆಗೆ ಸಂಬಂಧಿಸಿದ ಸಿಸ್ಕೊ ಗುತ್ತಿಗೆಗಳನ್ನು ತನ್ನ ಕಂಪೆನಿಗಳಿಗೆ ನೀಡಿದರು. ಹಾಗೂ, ವಿದೇಶಗಳಲ್ಲಿ ತಾನು ವ್ಯಾಪಾರಿ ಸಂಸ್ಥೆಗಳನ್ನು ಹೊಂದಿದ್ದೇನೆ ಎಂಬ ವಿಷಯವನ್ನು ಅವರು ತನ್ನ ಕಂಪೆನಿಗೆ ತಿಳಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News