ಬೆಂಗಳೂರು ಕೆರೆಗಳ ಕುರಿತು ಎನ್‌ಜಿಟಿ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Update: 2019-03-06 17:11 GMT

ಹೊಸದಿಲ್ಲಿ, ಮಾ. 6: ಬೆಂಗಳೂರಿನ ಕೆರೆಗಳು ಹಾಗೂ ನೀರಿನಾಗರಗಳ ಸುತ್ತ ಬಫರ್ ರೆನ್ ಮಿತಿಯನ್ನು ವಿಸ್ತರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.

ಬೆಂಗಳೂರಿಗೆ ಅನ್ವಯಿಸುವಂತೆ ಕೆರೆಗಳಿಂದ 75 ಮೀಟರ್, ಪ್ರಾಥಮಿಕ ರಾಜಕಾಲುವೆಯಿಂದ 50 ಮೀಟರ್, ದ್ವಿತೀಯ ರಾಜಕಾಲುವೆಯಿಂದ 35 ಮೀಟರ್ ಹಾಗೂ ತೃತೀಯ ರಾಜಕಾಲುವೆಯಿಂದ 25 ಮೀಟರ್ ಬಫರ್ ರೆನ್ ಅನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿಗದಿ ಮಾಡಿತ್ತು. ಹಸಿರು ನ್ಯಾಯಾದಿಕರಣದ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ನಗರದ ಬಫರ್ ರೆನ್ ಒಳಗಡೆ ನಿರ್ಮಿಸಲಾದ ಎಲ್ಲ ಕಟ್ಟಡಗಳನ್ನು ನಾಶಗೊಳಿಸಿ ಎಂದು ಬೆಂಗಳೂರು ನಗರ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ 2016ರ ಆದೇಶವನ್ನು ಪ್ರಶ್ನಿಸಿದ ಕರ್ನಾಟಕ ಸರಕಾರ, ಬೆಂಗಳೂರಿನ 2015 ಪರಿಷ್ಕೃತ ಮಾಸ್ಟರ್ ಪ್ಲಾನ್‌ಗೆ ಈ ಆದೇಶ ವಿರುದ್ಧವಾಗಿದೆ ಎಂದು ಹೇಳಿತ್ತು.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶವನ್ನು ಅನುಷ್ಠಾನಗೊಳಿಸಿದರೆ, ಬೆಂಗಳೂರಿನ ಶೇ. 95 ಕಟ್ಟಡಗಳನ್ನು ನಾಶಗೊಳಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರ ವಾದಿಸಿತ್ತು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶ ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಕಾಯ್ದೆ, ಯೋಜನಾ ಕಾಯ್ದೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ಕಾಯ್ದೆಗೆ ವಿರುದ್ಧವಾದುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಬಫರ್ ರೆನ್ ಅನ್ನು ಈಗಾಗಲೇ 30 ಮೀಟರ್‌ಗೆ ನಿಗದಿ ಮಾಡಲಾಗಿದೆ ಎಂದಿದೆ.

ಬೆಂಗಳೂರಿನಲ್ಲಿ ನೀರಿನಾಗರಗಳ ಅತಿಕ್ರಮವನ್ನು ಪತ್ತೆ ಮಾಡಿರುವುದರ ವಿರುದ್ಧ ಮಂತ್ರಿ ಟೆಕ್‌ರೆನ್ ಪ್ರೈವೇಟ್ ಲಿಮಿಟೆಡ್, ಕೋರ್ ಮೈಂಡ್ ಸಾಫ್ಟೇವೇರ್, ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News