ಝಿಂಬಾಬ್ವೆ ಕ್ರಿಕೆಟ್‌ನ ಮಾಜಿ ನಿರ್ದೇಶಕನಿಗೆ 10 ವರ್ಷ ನಿಷೇಧ
Update: 2019-03-06 23:49 IST
ಹರಾರೆ, ಮಾ.6: ಐಸಿಸಿಯ ಭ್ರಷ್ಟಾಚಾರ ಸಂಹಿತೆಯ ಮೂರು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಝಿಂಬಾಬ್ವೆ ಕ್ರಿಕೆಟ್‌ನ ಮಾಜಿ ನಿರ್ದೇಶಕ ಎನೊಕ್ ಇಕೊಪೆ ಅವರಿಗೆೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ)ಕ್ರಿಕೆಟ್ ಚಟುವಟಿಕೆಗಳಿಂದ 10 ವರ್ಷಗಳ ನಿಷೇಧ ಹೇರಿ ಬುಧವಾರ ಆದೇಶಿಸಿದೆ.
ಸಹಕಾರ ನೀಡದ, ತನಿಖೆಗೆ ಅಡಚಣೆ ಹಾಗೂ ತಡ ಮಾಡುವುದು ಸೇರಿ ಒಟ್ಟು ಮೂರು ಆರೋಪಗಳನ್ನು ಎದುರಿಸಿ ಭ್ರಷ್ಟಾಚಾರ ವಿರೋಧಿ ಘಟಕದಿಂದ ಕಳೆದ ವರ್ಷ ಅವರು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದರು.