ಅಗ್ರ 15ರೊಳಗೆ ಸ್ಥಾನ ಪಡೆಯುವ ಗುರಿ: ಸತ್ಯನ್
Update: 2019-03-06 23:52 IST
ಹೊಸದಿಲ್ಲಿ, ಮಾ.6: ವಿಶ್ವ ಟಿಟಿ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 28ನೇ ಸ್ಥಾನಕ್ಕೆ ಭಡ್ತಿ ಪಡೆದಿರುವ ಭಾರತದ ಟೇಬಲ್ ಟೆನಿಸ್ ಆಟಗಾರ ಜಿ.ಸತ್ಯನ್, ವರ್ಷಾಂತ್ಯದಲ್ಲಿ ತಮ್ಮ ಸ್ಥಾನವನ್ನು ಅಗ್ರ 15ರೊಳಗೆ ತಲುಪಿಸುವ ಗುರಿಯತ್ತ ಚಿತ್ತವಿರಿಸಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಭಾರತೀಯ ಆಟಗಾರನ ಜೀವನಶ್ರೇಷ್ಠ ರ್ಯಾಂಕಿಂಗ್ ಇದಾಗಿದೆ. ‘‘ನಾನು ಸದ್ಯ ಸರಿಯಾದ ಮಾರ್ಗದಲ್ಲಿದ್ದು, ವರ್ಷಾಂತ್ಯದಲ್ಲಿ ಅಗ್ರ 15ರ ಸ್ಥಾನಕ್ಕೆ ಏರಿಕೆ ಕಾಣುವುದು ನನ್ನ ಮುಖ್ಯ ಗುರಿಯಾಗಿದೆ’’ಎಂದು ಹೇಳಿದ್ದಾರೆ. ಫೆ.18ರಿಂದ 12 ತಿಂಗಳ ಅವಧಿಯಲ್ಲಿ ಅವರು ತೋರಿದ ಹಲವು ಉತ್ತಮ ಸರಣಿ ಪ್ರದರ್ಶನಗಳಿಂದ ರ್ಯಾಂಕಿಂಗ್‌ನಲ್ಲಿ ಏರಿಕೆ ಕಾಣಲು ಸಾಧ್ಯವಾಗಿದೆ. ಖತರ್ ಓಪನ್‌ನಲ್ಲಿ 16ನೇ ಸುತ್ತಿಗೆ ತಲುಪಿದ್ದು, ಹಾಂಕಾಂಗ್ ಹಾಗೂ ಕೊರಿಯ ಓಪನ್‌ನಲ್ಲಿ 32ನೇ ಸುತ್ತಿಗೆ, ಆಸ್ಟ್ರೇಲಿಯನ್ ಓಪನ್‌ನಲ್ಲಿ 16ನೇ ಸುತ್ತು ಮತ್ತು ಅಸ್ಟ್ರಿಯನ್ ಓಪನ್ ಟೂರ್ನಿಯಲ್ಲಿ 16ನೇ ಸುತ್ತಿನವರೆಗೂ ಅವರು ತಲುಪಿದ್ದರು.