×
Ad

ಇಬ್ಬರು ಆಟಗಾರರಿಗೆ 6 ಪಂದ್ಯಗಳ ನಿಷೇಧ

Update: 2019-03-06 23:55 IST

ಕೋಲ್ಕತಾ, ಮಾ.6: ಕಳೆದ ತಿಂಗಳು ನಡೆದ ಐ ಲೀಗ್ ಫುಟ್ಬಾಲ್ ಟೂರ್ನಿಯ ಈಸ್ಟ್ ಬೆಂಗಾಲ್ ಹಾಗೂ ಐಝ್ವ್‌ಲ್ ಮಧ್ಯದ ಪಂದ್ಯದಲ್ಲಿ ಪರಸ್ಪರರಿಗೆ ಉಗುಳಿದ ಆರೋಪದ ಮೇಲೆ ಬೆಂಗಾಲ್ ತಂಡದ ಸ್ಟ್ರೈಕರ್ ಜಾಬಿ ಜಸ್ಟಿನ್ ಹಾಗೂ ಐಝ್ವಿಲ್ ತಂಡ ಡಿಫೆಂಡರ್ ಕರೀಮ್ ಒಮೊಲಜಾ ಅವರಿಗೆ ತಲಾ 6 ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಮಂಗಳವಾರ ಈ ಕುರಿತು ಆಟಗಾರರ ವಿಚಾರಣೆ ನಡೆಸಿದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನ(ಎಐಎಫ್‌ಎಫ್) ಶಿಸ್ತು ಸಮಿತಿಯು ಇಬ್ಬರೂ ಆಟಗಾರರನ್ನು ತಪ್ಪಿತಸ್ಥರೆಂದು ಗುರುತಿಸಿ ತಲಾ 6 ಪಂದ್ಯಗಳ ನಿಷೇಧ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಆದರೆ ಈ ಕುರಿತು ಆಟಗಾರರು ಮನವಿ ಸಲ್ಲಿಸಬಹುದು ಎಂದು ಸಮಿತಿ ಹೇಳಿದೆ.

ಫೆ.25ರಂದು ಇಲ್ಲಿಯ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ಉಭಯ ನಡೆದ ಪಂದ್ಯ 1-1 ಗೋಲಿನಿಂದ ಡ್ರಾ ಆಗಿತ್ತು. ಇದೇ ಪಂದ್ಯದಲ್ಲಿ ನಡೆದ ಘಟನೆಯಲ್ಲಿ ರೆಫರಿ ಸಲ್ಲಿಸಿದ ವರದಿಯಲ್ಲಿ ಜಾಬಿ ಘಟನೆಯಲ್ಲಿ ಪಾಲ್ಗೊಂಡಿಲ್ಲದಿರುವುದು ಕಂಡುಬಂದಿತ್ತು. ಆದರೆ ಐಝ್ವೊಲ್ ತಂಡ ಪಂದ್ಯದ ಬಳಿಕ ಈ ಬಗ್ಗೆ ಶಿಸ್ತು ಸಮಿತಿಯ ಮುಖ್ಯಸ್ಥ ಉಷಾನಾಥ್ ಬ್ಯಾನರ್ಜಿ ಗಮನಕೆ್ಕ ತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News