ವಾಹನದಲ್ಲಿ 1,000 ಕೆಜಿ ಸ್ಫೋಟಕ ವಸ್ತುಗಳು ಪತ್ತೆ: ಇಬ್ಬರ ಬಂಧನ

Update: 2019-03-09 13:54 GMT

ಕೊಲ್ಕತ್ತಾ, ಮಾ.9: ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಗೂಡ್ಸ್ ವಾಹನವನ್ನು ಪೊಲೀಸರು ನಗರದ ಚಿತ್ಪುರ್ ಪ್ರದೇಶದಿಂದ ವಶಪಡಿಸಿಕೊಂಡಿದ್ದಾರೆಂದು ಕೊಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿರ್ದಿಷ್ಟ ಮಾಹಿತಿಯನ್ವಯ  ಕಾರ್ಯಾಚರಿಸಿದ ಪೊಲೀಸರು ಬಿ ಟಿ ರಸ್ತೆಯ ತಾಲಾ ಸೇತುವೆ ಸಮೀಪ ವಾಹನವನ್ನು ಶನಿವಾರ ತಡೆದು ಪರಿಶೀಲಿಸಿದಾಗ ಅದರೊಳಗೆ 27 ಗೋಣಿಚೀಲಗಳಲ್ಲಿ ಸುಮಾರು 1,000 ಕೆಜಿ ಪೊಟಾಶಿಯಂ ನೈಟ್ರೇಟ್ ಇರುವುದು ಪತ್ತೆಯಾಗಿತ್ತು. ಈ ಪೊಟಾಶಿಯಂ ನೈಟ್ರೇಟ್ ಅನ್ನು ಸ್ಫೋಟಕಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ವಾಹನದ ಚಾಲಕ ಮತ್ತು ಸಹಾಯಕನನ್ನು ಬಂಧಿಸಲಾಗಿದೆ.

ಒಡಿಶಾದಿಂದ ಬಂದ ಈ ವಾಹನವು ನಾರ್ಥ್ 24 ಪರಗಣಾ ಜಿಲ್ಲೆಯತ್ತ ತೆರಳುತ್ತಿತ್ತು. ಇಬ್ಬರು ಬಂಧಿತರನ್ನೂ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News