ಹೆಚ್ಚುವರಿ 11 ರಾಜ್ಯಗಳ ಡಿಡಿ ವಾಹಿನಿಗಳನ್ನು ಉಪಗ್ರಹ ವ್ಯವಸ್ಥೆಗೆ ತಂದ ಪ್ರಸಾರ ಭಾರತಿ: ಪ್ರಧಾನಿ

Update: 2019-03-09 17:07 GMT

ಹೊಸದಿಲ್ಲಿ, ಮಾ.9: ರಾಷ್ಟ್ರೀಯ ಪ್ರಸಾರಕ ಸಂಸ್ಥೆ ಪ್ರಸಾರ ಭಾರತಿ ಇನ್ನೂ 11 ರಾಜ್ಯಗಳ ದೂರದರ್ಶನ ವಾಹಿನಿಗಳನ್ನು ದೇಶದ ಉಪಗ್ರಹ ಸೇವೆ ವ್ಯಾಪ್ತಿಗೆ ತಂದಿದೆ. ಈ ಹನ್ನೊಂದು ವಾಹಿನಿಗಳಲ್ಲಿ ಐದು ಈಶಾನ್ಯ ರಾಜ್ಯಗಳಿಗೆ ಸೇರಿವೆ ಎಂದು ಶನಿವಾರ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ ಛತ್ತೀಸ್‌ಗಡ, ಗೋವಾ, ಹರ್ಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಉತ್ತರಾಖಂಡದ ಜನರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಪ್ರಸಾರ ಭಾರತಿ ಹೆಚ್ಚುವರಿ ಹನ್ನೊಂದು ವಾಹಿನಿಗಳನ್ನು ಉಪಗ್ರಹ ವ್ಯಾಪ್ತಿಗೆ ತಂದಿದ್ದು, ಮೊದಲ ಬಾರಿಗೆ ಡಿಡಿ ಉಚಿತ ಡಿಶ್‌ನಲ್ಲಿ ಲಭಿಸುವಂತೆ ಮಾಡಿದೆ. ಈ ಪೈಕಿ ಐದು ಚಾನೆಲ್‌ಗಳು ಈಶಾನ್ಯ ರಾಜ್ಯಗಳಿಗೆ ಸೇರಿವೆ.

ಈ ಬೆಳವಣಿಗೆ ಪ್ರಾದೇಶಿಕ ಸಂಸ್ಕೃತಿಯನ್ನು ಗಟ್ಟಿಗೊಳಿಸುವಲ್ಲಿ ಮತ್ತು ಜನರ ಅಭಿಲಾಷೆಗಳನ್ನು ಈಡೇರಿಸುವಲ್ಲಿ ಮುಖ್ಯ ಪಾತ್ರವಹಿಸಲಿದೆ ಎಂದು ಪ್ರಧಾನಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News