ಜಮ್ಮು: ಎಲ್‌ಒಸಿ ಬಳಿ ಸ್ಫೋಟಕ ಪತ್ತೆ

Update: 2019-03-09 17:25 GMT

ಜಮ್ಮು, ಮಾ.9: ಜಮ್ಮುವಿನ ಅಖ್ನೂರ್ ವಿಭಾಗದ ಗಡಿ ನಿಯಂತ್ರಣ ರೇಖೆಯ ಬಳಿ ಸುಧಾರಿತ ಸ್ಫೋಟಕ ಸಾಧನ(ಎಲ್‌ಇಡಿ)ವನ್ನು ಪತ್ತೆಹಚ್ಚಿ ಸಕಾಲದಲ್ಲಿ ನಿಷ್ಕ್ರಿಯಗೊಳಿಸಿದ ಕಾರಣ ಸಂಭಾವ್ಯ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖೌರ್-ಪಲ್ಲನ್‌ವಾಲಾ ರಸ್ತೆಯಲ್ಲಿ ದೈನಂದಿನ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ರಸ್ತೆ ಬದಿ ಇರಿಸಲಾಗಿದ್ದ ಎಲ್‌ಇಡಿ ಪತ್ತೆಹಚ್ಚಿ ತಕ್ಷಣ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ, ಸ್ಫೋಟಕ ಇರಿಸಿದ್ದ ಪ್ರದೇಶವನ್ನು ಪ್ರತ್ಯೇಕಿಸಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ. ಸ್ಥಳದಲ್ಲಿ ಇನ್ನೂ ಹೆಚ್ಚಿನ ಸ್ಫೋಟಕಗಳನ್ನು ಹುದುಗಿರಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪರಿಶೋಧನೆ ನಡೆಸಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿದ್ದು ಎಲ್‌ಇಡಿ ಇಟ್ಟಿರುವ ಶಂಕಿತ ಭಯೋತ್ಪಾದಕರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News