×
Ad

ಸೆರೆನಾ, ಹಾಲೆಪ್ ಜಯಭೇರಿ

Update: 2019-03-09 23:27 IST

ಇಂಡಿಯನ್ ವೆಲ್ಸ್ (ಅಮೆರಿಕ), ಮಾ.9: ಬೆಲಾರಸ್‌ನ ವಿಕ್ಟೊರಿಯಾ ಅಝರೆಂಕಾ ಅವರನ್ನು 7-5, 6-3 ನೇರ ಸೆಟ್‌ಗಳಿಂದ ಮಣಿಸಿದ ಅಮೆರಿಕದ ಸೆರೆನಾ ವಿಲಿಯಮ್ಸ್ ಶುಕ್ರವಾರ ರಾತ್ರಿ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಉಭಯ ಆಟಗಾರ್ತಿಯರು ಒಂದು ವರ್ಷದ ಹಿಂದಿನ ತಾಯ್ತನದ ರಜೆಯಿಂದ ವಾಪಸಾಗಿದ್ದಾರೆ. ತಾಯ್ತನ ಮುಗಿಸಿದ ಬಳಿಕ ಸೆರೆನಾ ಎರಡು ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಅಲ್ಲದೆ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಸ್ಥಾನ ಸಂಪಾದಿಸಿದ್ದರು. ಸುಮಾರು 2 ತಾಸುಗಳಿಗಿಂತ ಅಧಿಕ ಅವಧಿಗೆ ನಡೆದ ಪಂದ್ಯದಲ್ಲಿ ಸೆರೆನಾ ನಾಲ್ಕು ಏಸ್‌ಗಳನ್ನು ಸಿಡಿಸಿದರೆ, 9 ಡಬಲ್ ಫಾಲ್ಟ್‌ಗಳನ್ನು ಎಸಗಿದರು. 15 ಬ್ರೇಕ್ ಪಾಯಿಂಟ್‌ಗಳ ಪೈಕಿ 11 ಅಂಕಗಳನ್ನು ಉಳಿಸಿಕೊಂಡರು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಅಮೆರಿಕದ ಸ್ಲೋವಾನೆ ಸ್ಟೀಫನ್ಸ್ ಅವರು ಸ್ವಿಸ್ ಆಟಗಾರ್ತಿ ಸ್ಟೆಫಾನಿ ವೊಗೆಲೆ ಅವರಿಗೆ 3-6, 0-6 ಸೆಟ್‌ಗಳಿಂದ ಶರಣಾದರು. ನಾಲ್ಕನೇ ಶ್ರೇಯಾಂಕದ ಸ್ಲೋವಾನೆ 32 ಅನಗತ್ಯ ತಪ್ಪುಗಳನ್ನು ಎಸಗಿದರು.

ಮತ್ತೊಂದು ಪಂದ್ಯದಲ್ಲಿ ವಿಶ್ವ ನಂ.2 ರೋಮಾನಿಯದ ಸಿಮೊನಾ ಹಾಲೆಪ್ ಅವರು ಬಾರ್ಬರಾ ಸ್ಟ್ರೈಕೊವಾರನ್ನು 6-2, 6-4 ಸೆಟ್‌ಗಳಿಂದ ಸದೆಬಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News