ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2019-03-11 05:07 GMT

ಮಂಗಳೂರು, ಮಾ.11: ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಸಮಿತಿ ಸಭೆಯು ಇತ್ತೀಚೆಗೆ ಮಸೀದಿಯಲ್ಲಿ ಕೆ.ಎ.ಅಬ್ದುಲ್ಲ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಭೆಯಲ್ಲಿ 2019-20ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಫ್ಲವರ್ ಮುಹಮ್ಮದ್ ರಫೀಕ್ ಕಿನ್ನಿಗೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್ ಕಿನ್ನಿಗೋಳಿ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿಯಾಗಿ ಹಬೀಬ್ ಅತ್ತೂರು, ಕೋಶಾಧಿಕಾರಿಯಾಗಿ ಮುನೀರ್, ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಗೋಳಿಜೋರ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಟಿ.ಎಚ್.ಮಯ್ಯದ್ದಿ, ಕೆ.ಎ.ಅಬ್ದುಲ್ಲ, ಹಿದಾಯತುಲ್ಲ, ರಫೀಕ್, ದೀಪ್ ರಾಜ್ ಅಬ್ಬು, ಆರಿಫ್ ಟಿ.ಎಚ್., ಫಯಾಝ್, ಶಬೀರ್ ಕಿನ್ನಿಗೋಳಿ, ಮುಸ್ತಫಾ ಕಾಪಿಕಾಡ್, ಅಬ್ದುಲ್ ಖಾದರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News