ಲರ್ನ್ ದ ಕುರ್‌ಆನ್: ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ

Update: 2019-03-11 07:19 GMT

ರಿಯಾದ್, ಮಾ.11: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಧೀನ ಸಂಸ್ಥೆ ಎಜುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್‌ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ ರಿಯಾದ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ 5ನೇ ಹಂತದ ಕುರ್‌ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಅತೀಯಾ ಸನೂರ ಅಳೇಕಲ ಉಳ್ಳಾಲ (ಎಚ್.ಟಿ. ನಂ.1927) ಪ್ರಥಮ, ಮರ್ಯಮ್ ಬಾನು ಉಳ್ಳಾಲ ಮಕ್ಕಚ್ಚೇರಿ (ಎಚ್.ಟಿ. ನಂ.1896) ಹಾಗೂ ಫಾತಿಮಾ ಅಮ್ರೀನ್ ಕಣ್ಣೂರು (ಎಚ್.ಟಿ. ನಂ.2206) ದ್ವಿತೀಯ ಮತ್ತು ತಸ್ನೀಮಾ ಕೊಣಾಜೆ (ಎಚ್.ಟಿ. ನಂ.1989) ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಸಲಫಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಅಬೂ ಬಿಲಾಲ್ ಎಸ್.ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News