ಪಿಎನ್‌ಬಿ ಹಗರಣ: ನೀರವ್ ಮೋದಿ ವಿರುದ್ಧ ಹೊಸ ಆರೋಪ ಪಟ್ಟಿ ದಾಖಲು
Update: 2019-03-11 21:15 IST
ಹೊಸದಿಲ್ಲಿ, ಮಾ. 11: ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದ ಆರೋಪಿ ನೀರವ್ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಹೊಸ ಆರೋಪ ಪಟ್ಟಿ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಅಥವಾ ಪ್ರಾಸಿಕ್ಯೂಶನ್ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದು ನೀರವ್ ಮೋದಿ ಹಾಗೂ ಇತರರ ವಿರುದ್ಧ ಸಲ್ಲಿಸುತ್ತಿರುವ ಹೆಚ್ಚುವರಿ ಆರೋಪ ಪಟ್ಟಿ. ಈ ಪ್ರಕರಣದಲ್ಲಿ ಸಂಗ್ರಹಿಸಿದ ಹೆಚ್ಚುವರಿ ಪುರಾವೆಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ ಹಾಗೂ ಲಗತ್ತಿಸಿದೆ ಎಂದು ಅವರು ತಿಳಿಸಿದ್ದಾರೆ.