ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣ: ವಿಚಾರಣೆ ಮುಂದೂಡಿದ ಎನ್‌ಐಎ ನ್ಯಾಯಾಲಯ

Update: 2019-03-11 15:50 GMT

ಹೊಸದಿಲ್ಲಿ, ಮಾ. 11: ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟ (2007) ಪ್ರಕರಣದ ಆದೇಶವನ್ನು ಪಂಚಕುಲದ ವಿಶೇಷ ಎನ್‌ಐಎ ನ್ಯಾಯಾಲಯ ಸೋಮವಾರ ಕಾಯ್ದಿರಿಸಿದೆ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.

ಪ್ರಕರಣಕ್ಕೆ ಸಂಬಂಧಿಸಿ ಪುರಾವೆಗಳು ಇವೆ ಎಂದು ಪ್ರತಿಪಾದಿಸಿ ಪಾಕಿಸ್ತಾನಿ ಮಹಿಳೆಯೋರ್ವರು ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಪ್ರಕರಣದ ವಿಚಾರಣೆ ಮುಂದೂಡುವ ನಿರ್ಧಾರವನ್ನು ನ್ಯಾಯಾಲಯ ತೆಗೆದುಕೊಂಡಿದೆ. 2007 ಫೆಬ್ರವರಿ 18ರಂದು ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 10 ಮಂದಿ ಭಾರತೀಯರು ಸೇರಿದಂತೆ 68 ಮಂದಿ ಮೃತಪಟ್ಟಿದ್ದರು. ಆರೋಪ ಪಟ್ಟಿಯಲ್ಲಿ ಪಾಕಿಸ್ತಾನಿ ಮುಸ್ಲಿಮರನ್ನು ಗುರಿಯಾಗಿರಿಸಿ ಸ್ಫೋಟ ನಡೆಸಲಾಗಿತ್ತು ಎಂದು ಎನ್‌ಐಎ ಹೇಳಿತ್ತು.

ಘಟನೆ ಹರ್ಯಾಣ ಪಂಚಕುಲದಿಂದ 160 ಕಿ.ಮೀ. ದೂರದಲ್ಲಿರುವ ಪಾಣಿಪತ್ ಸಮೀಪದ ದಿವಾನಿ ಗ್ರಾಮದಲ್ಲಿ ಸಂಭವಿಸಿತ್ತು. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಪರ್ಕ ಏರ್ಪಡಿಸಿದ್ದ ಈ ರೈಲು ಅತ್ತಾರಿ ಕಡೆ ಸಂಚರಿಸುತ್ತಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News