​ಕಬಕ : ಮಾ.15ಕ್ಕೆ ಮೌಲಾನ ಹಲ್ಕಾ ದ್ಸಿಕ್ರ್, ದಫ್ ಸ್ಪರ್ಧೆ

Update: 2019-03-14 03:41 GMT

ವಿಟ್ಲ: ಕಬಕ ಮೌಲಾನ ಹಲ್ಕಾ ದ್ಸಿಕ್ರ್ 19 ನೇ ವಾರ್ಷಿಕ ಮಹಾ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮ ಮಾ. 15 ರಂದು ಕಬಕ ಮೌಲಾನ ಕಾಟೇಜ್ ನ ಮರ್ಹೂಮ್ ಪುತ್ತೂರು ತಂಙಳ್ ವೇದಿಕೆಯಲ್ಲಿ ನಡೆಯಲಿದೆ. 

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಹಾಜಿ ಅಬ್ದುಲ್ಲಾ ಫೈಝಿ ಚೆಂಗಳ ಉದ್ಘಾಟಿಸಲಿದ್ದು, ಮೌಲಾನ ಹಾಜಿ ಅಬ್ದುಲ್ ರಝಾಕ್ ಮಲೇಶಿಯಾ ಅಧ್ಯಕ್ಷತೆ ವಹಿಸುವವರು. 

ಪೋಳ್ಯ ಜುಮಾ ಮಸೀದಿ ಮುದರ್ರಿಸ್ ಸೈಯದ್ ಯಹ್ಯಾ ತಂಙಳ್ ದುಹಾ ನೆರವೇರಿಸಲಿದ್ದು, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಖತೀಬ್ ಆಸಿಫ್ ಅಝ್ಅರಿ ಮೌಲಾನ ಹಲ್ಕಾ ದ್ಸಿಕ್ರ್ ನ ನೇತೃತ್ವ ವಹಿಸುವವರು.

ಖಲೀಲ್ ರಹ್ಮಾನ್ ಖಾಷಿಫಿ ಶಾರ್ಜಾ ಮುಖ್ಯ ಬಾಷಣಗೈಯುವರು ಹಾಗೂ ಹಲವಾರು ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸುವರು. ಬಳಿಕ ರಾಜ್ಯದ ವಿವಿಧ ತಂಡಗಳಿಂದ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿರುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News