ಮಾ.17: ‘ಅನುಭಾವ ಸಂಗಮ’ ಚಿಂತನಗೋಷ್ಠಿ

Update: 2019-03-14 12:16 GMT

ಮಂಗಳೂರು, ಮಾ.14: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದ.ಕ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಶಕ್ತಿ ಪಿಯು ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾ.17ರಂದು ಅಪರಾಹ್ನ 2:30ಕ್ಕೆ ಶಕ್ತಿನಗರದ ಶಕ್ತಿ ಪಿಯು ಕಾಲೇಜು ಸಭಾಂಗಣದಲ್ಲಿ ‘ಅನುಭಾವ ಸಂಗಮ’ ಚಿಂತನ ಗೋಷ್ಠಿಗಳು ನಡೆಯಲಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬೈಕಾಡಿ ಜನಾರ್ದನ ಆಚಾರ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ‘ವರ್ತಮಾನಕ್ಕೂ ವಚನ’ ಶೀರ್ಷಿಕೆಯಡಿ ನಡೆಯುವ ಚಿಂತನ ಗೋಷ್ಠಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸುವರು. ಪ್ರಾಚಾರ್ಯ ಪ್ರಭಾಕರ ಜಿ.ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್ ಅಧ್ಯಕ್ಷತೆ ವಹಿಸುವರು.

‘ವಚನಗಳು ಸಾರುವ ಸಾರ್ವಕಾಲಿಕ ವೌಲ್ಯಗಳು’ ವಿಷಯದ ಕುರಿತು ಅಧ್ಯಾಪಕಿ ಸಾವಿತ್ರಿ ರಮೇಶ್ ಭಟ್, ‘ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ವಚನಗಳು’ ಕುರಿತು ಕೀರ್ತನಕಾರ ಡಾ.ಎಸ್. ಪಿ.ಗುರುದಾಸ್ ವಿಚಾರ ಮಂಡಿಸುವರು. ಡಾ.ನಾಯಕ್ ರೂಪ್‌ಸಿಂಗ್ ಹಾಗೂ ಸುಜಯಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಮಾರೋಪದ ಅಧ್ಯಕ್ಷತೆಯನ್ನು ಡಾ.ಮುರಳೀಧರ್ ನಾಕ್ ವಹಿಸುವರು. ವಿದ್ಯಾ ಕಾಮತ್ ಜಿ. ಮುಖ್ಯ ಅತಿಥಿಯಾಗಿರುವರು. ಬೈಕಾಡಿ ಜನಾರ್ದನ ಆಚಾರ್ ಸಮಾರೋಪ ಭಾಷಣ ನಡೆಸುವರು.

ಸುದ್ದಿಗೋಷ್ಠಿಯಲ್ಲಿ ಶಕ್ತಿ ಪಿಯು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಸದಸ್ಯ ರಮೇಶ್ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News