ಮಾ.17: ಕಾಟಿಪಳ್ಳದಲ್ಲಿ ಎಸ್ಸೆಸ್ಸೆಫ್ ಕ್ಯಾಂಪಸ್-ವಿಸ್ಡಂ 'ತಿಂಕ್ ಲ್ಯಾಬ್' ಕ್ಯಾಂಪ್

Update: 2019-03-14 14:03 GMT

ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕ್ಯಾಂಪಸ್ ಹಾಗೂ ವಿಸ್ಡಂ ಸಮಿತಿ ವತಿಯಿಂದ  ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿಗಳು, ಜಿಲ್ಲಾ ವಿಸ್ಡಂ ಕನ್ವೀನರ್ ಗಳು, ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿಗಳು, ಡಿವಿಷನ್ ವಿಸ್ಡಂ ಕನ್ವೀನರ್ ಗಳಿಗಾಗಿ ರಾಜ್ಯ ಮಟ್ಟದ ವರ್ಕ್ ಶಾಪ್ "ತಿಂಕ್ ಲ್ಯಾಬ್" ಮಾ.17ರಂದು ಬೆಳಗ್ಗೆ ಮಿಸ್ಬಾಹ್ ಮಹಿಳಾ ಕಾಲೇಜು ಕಾಟಿಪಳ್ಳದಲ್ಲಿ ನಡೆಯಲಿದೆ.

ಎಸ್ಸೆಸ್ಸೆಪ್ ರಾಜ್ಯಾಧ್ಯಕ್ಷ ಸಯ್ಯದ್ ಸಿ.ಟಿ.ಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ಅಧ್ಯಕ್ಷತೆಯಲ್ಲಿ , ಎಸ್ಸೆಸ್ದೆಫ್ ರಾಷ್ಟ್ರೀಯ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮ ಉದ್ಘಾಟಿಸುವರು.

ಜಮಾಲ್ ಮಾಲಿಕುನ್ನು, ಸಿ.ಎನ್. ಜಾಫರ್ ಕಾಸರಗೋಡ್, ಸಿ.ಟಿ.ಎಂ ತಂಙಳ್ ಮನ್ಶರ್, ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಶರೀಫ್ ಮಾಸ್ಟರ್ ಬೆಂಗಳೂರು ಮೊದಲಾದವರು ತರಗತಿ ನಡೆಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News