ದಮನಿತ ಮಹಿಳೆಯರಿಗೆ ಜಿಲ್ಲಾ ಕೋಶ/ಸಮಿತಿ ರಚನೆ

Update: 2019-03-14 16:05 GMT

ಉಡುಪಿ, ಮಾ.14: ಉಡುಪಿ ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ಜಿಲ್ಲಾ ಕೋಶ /ಸಮಿತಿಯನ್ನು ರಚಿಸಲಾಗಿದ್ದು, ದಮನಿತ ಮಹಿಳೆಯರು ತಮ್ಮ ಮಾಹಿತಿಯನ್ನು ಹಾಗೂ ಅವರಿಗೆ ಅವಶ್ಯಕವಿರುವ ಸರ್ಕಾರದ ಸೌಲ್ಯಗಳನ್ನು ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಮಾಹಿತಿ ನೀಡುವಂತೆ ಅಥವಾ ಪತ್ರದ ಮೂಲಕ ಮಾಹಿತಿಗಳ್ನು ಕಳುಹಿಸುವಂತೆ ಸೂಚಿಸಲಾಗಿದೆ.

ಸಂಬಂಧಿತ ಮಹಿಳೆಯರು ನೀಡುವ ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುವುದು. ಹಾಗೂ ತಮಗೆ ಅವಶ್ಯವಿರುವ ಯೋಜನೆಗಳ ಕುರಿತು ಪತ್ರ ಬರೆಯಲಾಗುವುದು. ಸರ್ಕಾರದಿಂದ ನೀಡಲಾಗುವ ಸೌಲ್ಯಗಳನ್ನು ಒದಗಿಸಲು ಇಲಾಖೆಯಿಂದ ಪ್ರಯತ್ನಿಸಲಾಗುವುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ ಮಣಿಪಾಲ ದೂ.ಸಂಖ್ಯೆ: 0820-2574978ನ್ನು ಕಚೇರಿ ವೇಳೆ ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News