ಮಂಗಳೂರು: ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

Update: 2019-03-14 16:17 GMT

ಮಂಗಳೂರು, ಮಾ.14: ನಗರ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬಸ್‌ಗಳ ವಿರುದ್ಧ ಮಂಗಳೂರು ಸಂಚಾರ ಪೊಲೀಸರು ಗುರುವಾರ ವಿಶೇಷ ಕಾರ್ಯಚಾರಣೆ ನಡೆಸಿ, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದ ಬಸ್‌ಗಳ ವಿರುದ್ಧ ಒಟ್ಟು 271 ಪ್ರಕರಣ ದಾಖಲಿಸಿದ್ದು, 32,600 ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಇದರಲ್ಲಿ ಕರ್ಕಶ ಹಾರ್ನ್ ಬಳಸಿದವರ ವಿರುದ್ಧ 95 ಪ್ರಕರಣ, ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್‌ನ್ನು ಚಲಾಯಿಸಿದವರ ವಿರುದ್ಧ 38 ಪ್ರಕರಣ, ಪ್ರಯಾಣಿಕರಿಗೆ ಟಿಕೆಟ್ ನೀಡದೇ ಇರುವ ಕುರಿತು 79 ಪ್ರಕರಣ, ಫುಟ್‌ಬೋರ್ಡ್‌ನ ಮೇಲೆ ಪ್ರಯಾಣ ಮಾಡಿದ ಬಸ್‌ಗಳ ವಿರುದ್ಧ ಒಂಬತ್ತು ಪ್ರಕರಣ, ಇತರ 50 ಪ್ರಕರಣವನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News