ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರು ಸೇರಿಸಲು ಎಸ್ಸೆಸ್ಸೆಫ್ ಕರೆ

Update: 2019-03-15 05:25 GMT

ಮಂಗಳೂರು, ಮಾ. 14: ಪ್ರಜಾಪ್ರಭುತ್ವ ದೇಶದಲ್ಲಿ ಮತದಾನವು ಪ್ರತಿಯೊಬ್ಬರ ಹಕ್ಕು, ಕರ್ತವ್ಯ ಮತ್ತು  ಪ್ರಬಲ ಅಸ್ತ್ರವಾಗಿದ್ದು, 18 ವರ್ಷ ದಾಟಿದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಅದನ್ನು ನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದವರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಎಲ್ಲಾ  ಶಾಖೆಗಳಲ್ಲಿರುವ ಎಸ್ಸೆಸ್ಸೆಫ್ ಕಾರ್ಯಕರ್ತರು ಗಮನ ಹರಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ  ಸೈಯದ್ ಉಮರ್ ಅಸ್ಸಖಾಫ್ ಕರೆ ನೀಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವಂತೆ ಚುನಾವಣಾ ಆಯೋಗವು ಮಾ. 19ರವರೆಗೆ ಮತದಾರರ ನೋಂದಾವಣೆಗೆ ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ಸದುಪಯೋಗಪಡಿಸುವಂತೆ ಹಾಗೂ ಪಟ್ಟಿಯಲ್ಲಿ ಶಾಖಾ ವ್ಯಾಪ್ತಿಯ ಸರ್ವ ಮತದಾರರ ಹೆಸರು ಇರುವುದನ್ನು ಖಾತ್ರಿಪಡಿಸುವಂತೆ ಹಾಗೂ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಂತರದ ಭಾಷಣಗಳಲ್ಲಿ ಖತೀಬರು ಈ ಬಗ್ಗೆ ಜಾಗೃತಿ ಮೂಡಿಸುವಂತೆ  ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News