ಮಾ.16: ಮಲಾರ್ ಹೆಲ್ಪ್ ಲೈನ್‌ನ ವಾರ್ಷಿಕೋತ್ಸವ

Update: 2019-03-15 11:05 GMT

ಮಂಗಳೂರು, ಮಾ.15: ಪಾವೂರು ಗ್ರಾಮದ ಮಲಾರ್ ಹೆಲ್ಪ್ ಲೈನ್‌ನ ಪ್ರಥಮ ವಾರ್ಷಿಕೋತ್ಸವವು ಮಾ.16ರಂದು ಮಗ್ರಿಬ್ ನಮಾಝ್ ಬಳಿಕ ಮಲಾರ್ ಟಿಪ್ಪು ನಗರದಲ್ಲಿ ನಡೆಯಲಿದೆ. ವಾರ್ಷಿಕೋತ್ಸವದ ಅಂಗವಾಗಿ ಪಿಎಫ್‌ಐ ಮೆಡಿಕಲ್ ಟೀಂ ಮಲಾರ್ ಇದರ ಸಹಕಾರದಲ್ಲಿ ಉಚಿತ ಮುಂಜಿ ಹಾಗೂ ಸೌಹಾರ್ದ ಸಂಗಮ ಜರುಗಲಿದೆ.

ಮರ್ಹೂಂ ಪಿ. ಇಸ್ಮಾಯೀಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಾರ್ ಹೆಲ್ಪ್ ಲೈನ್‌ನ ಅಧ್ಯಕ್ಷ ಕಬೀರ್ ಮಲಾರ್ ವಹಿಸಲಿದ್ದು, ಬದ್ರಿಯಾ ಮಸೀದಿಯ ಖತೀಬ್ ಹನೀಫ್ ಸಅದಿ ಧ್ವಜಾರೋಹಣಗೈಯುವರು.

ಮಲಾರ್ ಅರಸ್ತಾನ ಎಎಂಜೆಎಂ ಖತೀಬ್ ಅಬ್ದುಲ್ ಸಲಾಂ ಫೈಝಿ ಉದ್ಘಾಟಿಸಲಿದ್ದು, ತಿರುವನಂತಪುರದ ಕೊನ್ನಿಯೂರ್ ಶಫೀಖ್ ಅಲ್ ಖಾಸಿಮಿ ಮತ ಪ್ರವಚನ ನೀಡುವರು. ಮುಖ್ಯ ಅತಿಥಿಯಾಗಿ ಪಿಎಫ್‌ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಕಾಟಿಪಳ್ಳ, ಎಎಂಜೆಎಂ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಮೇಯರ್ ಕೆ.ಅಶ್ರಫ್, ಇಮಾಮ್ ಕೌನ್ಸಿಲ್‌ನ ರಾಜ್ಯ ಕೋಶಾಧಿಕಾರಿ ರಫೀಕ್ ದಾರಿಮಿ, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ನಾಸಿರ್ ದಾರಿಮಿ, ನೌಫಾಲ್ ಮರ್ಝೂಕಿ, ಝಾಹಿದ್ ಮಲಾರ್, ಫಿರೋಝ್ ಮಲಾರ್, ಮಜೀದ್, ಮುಸ್ತಫಾ ಪಾವೂರು, ನಾಸಿರ್ ಮಲಾರ್, ಹಾರಿಸ್ ಮಲಾರ್, ಗ್ರಾಪಂ ಸದಸ್ಯ ಹಸನ್ ಎಂ.ಪಿ., ಹಾಜಿ ಆಸಿಫ್ ಎಂ.ಎಸ್., ಮಜೀದ್ ಮಾಸ್ಟರ್, ಹಾಜಿ ಅಬ್ದುರ್ರಝಾಕ್, ಮುಹಮ್ಮದ್ ಹನೀಫ್, ಇಸ್ಮಾಯೀಲ್ ಎಸ್.ಎಂ., ಮುನೀರ್, ಆಸೀಫ್ ಅಕ್ಷರನಗರ ಮತ್ತಿತರರು ಭಾಗವಹಿಸುವರು ಎಂದು ಸಮೀರ್ ಟಿಪ್ಪುನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News