ಮಾ. 29ರಿಂದ ತೌಳವ ಉಚ್ಚಯ ಕಾರ್ಯಕ್ರಮ

Update: 2019-03-15 11:06 GMT

ಮಂಗಳೂರು, ಮಾ.15: ತುಳುನಾಡ ರಕ್ಷಣಾ ವೇದಿಕೆಯ 10ನೆ ವರ್ಷದ ಸಂಭ್ರಮದ ತುಳುನಾಡ ದೇಹಧಾಡ್ಯ ಪ್ರದರ್ಶನ, ಬಹುಭಾಷಾ ಕವಿಗೋಷ್ಠಿ, ವಿಚಾರಗೋಷ್ಠಿಗಳು, ಜಾನಪದ, ಸಂಸ್ಕೃತಿ ಪ್ರದರ್ಶನ, ಗುಡಿ ಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನ, ತುಳುನಾಡ ದಿಬ್ಬಣ, ತುಳುನಾಡಿನ ಆಹಾರೋತ್ಸವ, ತುಳುಹಾಸ್ಯ ಕಾರ್ಯಕ್ರಮ, ಯಕ್ಷಗಾನ, ನಾಟಕ, ನೃತ್ಯ ಕೋಸ್ಟಲ್‌ವುಡ್ ಸಿನೆಮಾ ಪರ್ಬ ತುಳುನಾಡಿನ ಅಭಿವೃದ್ಧಿ ಮತ್ತು ಐಕ್ಯತೆಯಲ್ಲಿ ಮಹಿಳೆಯರ ಪಾತ್ರ ಕುರಿತ ಕಾರ್ಯಕ್ರಮಗಳು, ತೌಳವ ರತ್ನ, ತೌಳವ ಚಕ್ರವರ್ತಿ, ತೌಳವ ಸಿರಿ, ಪ್ರಶಸ್ತಿ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿದೆ.

ಸ್ವಾತಂತ್ರ್ಯದ ಬಾವುಟ ಹಾರಿಸಿದ ನೆನಪಿಗಾಗಿ ಬಾವುಟ ಗುಡ್ಡೆಯಿಂದ ಪುರಭವನದವರೆಗೆ ಮಾ.29ರಂದು ಅಪರಾಹ್ನ 2:30ಕ್ಕೆ ತೌಳವ ಉಚ್ಚಯ ದಿಬ್ಬಣ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News