ಕಲ್ಪನೆ, ಆಸಕ್ತಿ ಯಶಸ್ಸಿನ ಗುಟ್ಟು: ಡಾ.ಜಯಪ್ರಕಾಶ್ ರಾವ್

Update: 2019-03-15 12:15 GMT

ಮಂಗಳೂರು, ಮಾ.15: ಕೈಗೊಂಡಿರುವ ವೃತ್ತಿಯನ್ನು ವಿಧೇಯತೆಯಿಂದ ಮಾಡಬೇಕು. ಕಲ್ಪನೆ ಮತ್ತು ಆಸಕ್ತಿಯೇ ಯಶಸ್ಸಿನ ಗುಟ್ಟು ಎಂದು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಜಯಪ್ರಕಾಶ್ ರಾವ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಚಟುವಟಿಕೆ ಸಮಿತಿಯು ‘ಕಲೋತ್ಸವ 2019’ ಕಾರ್ಯಕ್ರಮವನ್ನು ನಗರದ ಕಾಲೇಜಿನ ಎಲ್.ಎಫ್. ರಸ್ಕೀನ್ಹಾ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಲವಾರು ಬಹುಮುಖಿ ಪ್ರತಿಭೆಗಳಿವೆ. ಈಗಿನ ಉನ್ನತ ಶಿಕ್ಷಣದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಶಿಕ್ಷಣವು ತರಗತಿಯ ಪರಿಮಿತಿಗೆ ಸೀಮಿತವಾಗಿರದೆ ಅದು ಹೊರಜಗತ್ತಿಗೆ ಕಾಲಿಡಲು ಪ್ರಯತ್ನಿಸುತ್ತದೆ. ವಿದ್ಯಾರ್ಥಿಗಳ ಪಠ್ಯೇತರ ಸಾಧನೆಯು ಅವರ ಯಶಸ್ಸನ್ನು ಗುರುತಿಸುತ್ತದೆ. ಒಬ್ಬ ಉದ್ಯೋಗದಾತ ಅಭ್ಯರ್ಥಿಯ ಪಠ್ಯೇತರ ಸಾಧನೆಯನ್ನು ಗುರುತಿಸುತ್ತಾನೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಕಲೋತ್ಸವದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಚಟುವಟಿಕೆ ಸಮಿತಿಯ ಕೋ-ಆರ್ಡಿನೇಟರ್ ಡಾ. ಈಶ್ವರ ಭಟ್ ಕಲೋತ್ಸವದ ಪರಿಕಲ್ಪನೆ ಮತ್ತು ಯಶಸ್ಸಿನ ಬಗ್ಗೆ ತಿಳಿಸಿದರು. ಸುಮಾರು 430 ವಿದ್ಯಾರ್ಥಿ ಸಾಧಕರಿಗೆ ಪ್ರಮಾಣಪತ್ರ ವಿತರಿಸಲಾಯಿತು

ಕಾಲೇಜಿನ ಕುಲಸಚಿವ ಡಾ.ಎ.ಎಂ. ನರಹರಿ, ವಿದ್ಯಾರ್ಥಿ ಚಟುವಟಿಕೆ ಸಮಿತಿಯ ಸಂಯೋಜಕ ಡಾ.ಈಶ್ವರ ಭಟ್ ಹಾಗೂ ಸಹಸಂಯೋಜಕಿ ಸಂಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟೀನಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News