ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ ಇಸ್ರೋ ವಿಜ್ಞಾನಿ ಭೇಟಿ

Update: 2019-03-15 15:12 GMT

ಶಿರ್ವ, ಮಾ.15: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ಕಾಲೇಜಿನ ಐಎಸ್‌ಟಿ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಜಿ ದಿವಕರ್ ಪಾರ್ಸಿ ಅವರಿಂದ ‘ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉಪಯೋಗ ಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾ.14 ರಂದು ಜರಗಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ನಡೆಸಿರುವ ಯೋಜನೆಗಳು ಮತುತಿ ಈಗ ನಡೆಸುತಿತಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಇಸ್ರೋದ ಪ್ರಮುಖ ಯೋಜನೆಗಳಾದ ಚಂದ್ರಯಾನ ಐ ಮತ್ತು ಮಂಗಳಯಾನ ಐ ಬಗ್ಗೆ ವಿವರಿಸಿದರು.

ಉಪಗ್ರಹಗಳ ಮೂಲಕ ಒಂದು ಉಪಗ್ರಹದಿಂದ ಇನ್ನೊಂದು ಉಪಗ್ರಹಕ್ಕೆ ಹೇಗೆ ಸಂಪರ್ಕ ಹೊಂದುವುದು, ಜಿಯೋ-ಪೆನ್ಸಿಂಗ್, ಜಿಯೋ-ಟ್ಯಾಗಿಂಗ್, ಮೀನಿನ ಸಂಗ್ರಹಣಾ ಪ್ರದೇಶಗಳನ್ನು ಗುರುತಿಸುವುದು, ಬೆಳೆ ನಿರ್ವಹಣೆ, ಅರಣ್ಯದ ಬೆಂಕಿಪತ್ತೆ ಹಚ್ಚುವಿಕೆ, ನಕ್ಷೆ ತಯಾರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಂವೇದನಾ ಉಪಗ್ರಹ ವಹಿಸಿರುವ ಪಾತ್ರವನ್ನು ಅವರು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ವಿವಿದ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿ ದ್ದರು. ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಸ್ವಾಗತಿಸಿದರು. ಗಣಕ ಯಂತ್ರ ವಿಭಾಗದ ಪ್ರಾಧ್ಯಾಪಕ ವೇಣು ಗೋಪಾಲ್ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News