ಮಾ.18ರಿಂದ ಬಾನುಲಿಯಲ್ಲಿ ‘ಜನಮತ-ಅಭಿಮತ’

Update: 2019-03-15 15:24 GMT

ಮಂಗಳೂರು, ಮಾ.15: ಮಂಗಳೂರು ಆಕಾಶವಾಣಿ ಕೇಂದ್ರವು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮತದಾರರ ಜಾಗೃತಿಗಾಗಿ ‘ಜನಮತ-ಅಭಿಮತ’ ನೇರ ಫೋನ್‌ ಇನ್ ಕಾರ್ಯಕ್ರಮ ಹಾಗೂ ‘ಚುನಾವಣಾ ಹಬ್ಬ’ ಸಂದರ್ಶನಗಳನ್ನಾಧರಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

‘ಜನಮತ-ಅಭಿಮತ’ ನೇರ ಫೋನ್‌ ಇನ್ ಕಾರ್ಯಕ್ರಮ ಮಾ.18, 20 ಮತ್ತು 27, ಏಪ್ರಿಲ್ 3, 10 ಹಾಗೂ 17ರಂದು ಬೆಳಗ್ಗೆ 9:15ಕ್ಕೆ ಪ್ರಸಾರವಾಗಲಿದೆ. ‘ಚುನಾವಣಾ ಹಬ್ಬ’ ಸಂದರ್ಶನ ಕಾರ್ಯಕ್ರಮ ಪ್ರತೀ ಮಂಗಳವಾರ ಹಾಗೂ ಶುಕ್ರವಾರ ಬೆಳಗ್ಗೆ 7:15ಕ್ಕೆ ಬಿತ್ತರಗೊಳ್ಳಲಿದೆ. ಮಾ.19ರಿಂದ ಏಪ್ರಿಲ್ 18ರವರೆಗೆ ಪ್ರಸಾರವಾಗಲಿದೆ.

ನೇರ ಪ್ರಸಾರದಲ್ಲಿ ಜಿಲ್ಲಾಧಿಕಾರಿ: ಮಾ.18ರಂದು ಬೆಳಗ್ಗೆ 9:15ಕ್ಕೆ ರಂದು ನಡೆಯಲಿರುವ ‘ಜನಮತ-ಅಭಿಮತ’ ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ‘ಚುನಾವಣಾ ಮಾದರಿ ನೀತಿ ಸಂಹಿತೆ’ ಕುರಿತು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭಾಗವಹಿಸಲಿದ್ದಾರೆ. ಮಾದರಿ ನೀತಿ ಸಂಹಿತೆಗೆ ಸಂಬಂಧಪಟ್ಟಂತೆ ಶ್ರೋತೃಗಳು ಪ್ರಶ್ನೆಗಳನ್ನು ಕೇಳಲು ದೂ.ಸಂ.: 0824- 2211999, ಮೊ. 8277038000ನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News