ಉಡುಪಿ ಮುಕ್ತ ವಿವಿಯ ಸಂಪರ್ಕ ತರಗತಿ

Update: 2019-03-15 16:29 GMT

ಉಡುಪಿ, ಮಾ.15: ಉಡುಪಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವ ಪ್ರಥಮ ಎಂ.ಎ ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಪ್ರಥಮ ಎಂ.ಕಾಂ. ವಿಷಯಗಳಿಗೆ ಮಾತ್ರ ಮಾ.21ರಿಂದ 25ರವರೆಗೆ ಸಂಪರ್ಕ ತರಗತಿಗಳು ಉಡುಪಿ ನಗರದ ಎಂಜಿಎಂ ಕಾಲೇಜಿನಲ್ಲಿ ನಡೆಯಲಿವೆ. ಈ ಸಂಪರ್ಕ ತರಗತಿ ಗಳಿಗೆ ವಿದ್ಯಾರ್ಥಿಗಳು ಹಾಜರಾಗುವಂತೆ ತಿಳಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರಾಮುವಿ, ಪ್ರಾದೇಶಿಕ ಕೇಂದ್ರ, ಬನ್ನಂಜೆ, ಉಡುಪಿ ಇಲ್ಲಿಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗೆ ವಿವಿ ಯ ವೆಬ್‌ಸೈಟ್ -www.ksoumysore.edu.in- ಅಥವಾ ದೂರವಾಣಿ :0820-2522247ನ್ನು ಅಥವಾ ಸಂಬಂಧಪಟ್ಟ ವಿಷಯದ ವಿಭಾಗ ಮುಖ್ಯಸ್ಥ ರನ್ನು ಸಂಪರ್ಕಿಸಬಹುದು ಎಂದು ಕರಾಮುವಿ ಉಡುಪಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ.ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News