ಉಡುಪಿ: ಮಾ.17ರಂದು ಸುಲ್ತಾನ್ ಡೈಮೆಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂ ಶುಭಾರಂಭ

Update: 2019-03-15 16:51 GMT

ಉಡುಪಿ, ಮಾ.15: ದಕ್ಷಿಣ ಭಾರತದ ಹೆಸರಾಂತ ಜ್ಯುವೆಲ್ಲರಿಗಳಲ್ಲಿ ಒಂದಾಗಿರುವ ಸುಲ್ತಾನ್ ಡೈಮೆಂಡ್ಸ್ ಆ್ಯಂಡ್ ಗೋಲ್ಡ್‌ನ 10ನೇ ಶೋರೂಂ ಮಾ.17ರಂದು ಉಡುಪಿಯಲ್ಲಿ ಶುಭಾರಂಭಗೊಳ್ಳಲಿದೆ.

ನೂತನ ಮಳಿಗೆಯು ಉಡುಪಿಯ ವಿ.ಎಸ್.ಟಿ. ರಸ್ತೆಯಲ್ಲಿರುವ ಗೀತಾಂಜಲಿ ಸಿಲ್ಕ್ಸ್ ಸಮೀಪದ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿ ಅಂದು ಪೂರ್ವಾಹ್ನ 11 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸುವರು. ಅಸ್ಸೈಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್‌  ದುಆಗೈಯುವರು.

ವಜ್ರಾಭರಣ ವಿಭಾಗವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅನಕಟ್ ಮತ್ತು ಅಮೂಲ್ಯ ಆಭರಣಗಳ ವಿಭಾಗವನ್ನು ಉಡುಪಿ ಕ್ರೈಸ್ತ ವಲಯದ ಪ್ರಧಾನ ಧರ್ಮಗುರು ಅ.ವಂ. ರೆವರೆಂಡ್ ಫಾ.ವಲೇರಿಯನ್ ಮೆಂಡೋನ್ಸಾ, ಬ್ರೈಡಲ್ ವಿಭಾಗವನ್ನು ಉಡುಪಿ ಜಾಮಿಯ ಮಸ್ಜಿದ್ ಖತೀಬ್ ಮೌಲನಾ ಅಬ್ದುರ್ರಶೀದ್ ನದ್ವಿ ಉಮ್ರಿ, ವಿವಾಹ್ ಮತ್ತು ಸಂಸ್ಕೃತಿ ವಿಭಾಗವನ್ನು ಉಡುಪಿ ಶಾಸಕ ರಘುಪತಿ ಭಟ್, ಚಿನ್ನ ಮತ್ತು ಬೆಳ್ಳಿಯ ಆಭರಣಗಳ ವಿಭಾಗವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅನಾವರಣಗೊಳಿಸುವರು.

ಅತಿಥಿಗಳಾಗಿ ನಗರಸಭಾ ಸದಸ್ಯೆ ಮಾನಸಾ ಸಿ. ಪೈ, ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್‌ನ ಸದಸ್ಯ ಜಿ. ಜಯ ಆಚಾರ್ಯ, ತರಂಗ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ನ ಚೆಯರ್‌ ಮ್ಯಾನ್ ಡಾ.ಜೆರ್ರಿ ವಿನ್ಸೆಂಟ್ ಡಯಾಸ್, ಸಾಯಿರಾಧಾ ಗ್ರೂಪ್‌ನ ಎಂ.ಡಿ. ಮನೋಹರ್ ಎಸ್. ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಿ.ಎಂ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಸಂಯುಕ್ತ ಜಮಾಅತ್ ಅಧ್ಯಕ್ಷ ಎನ್.ಅಬ್ದುಲ್ಲಾ ಹಾಜಿ ತೌಫೀಕ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಉಜ್ವಲ್ ಗ್ರೂಪ್ ಎಂ.ಡಿ. ಪುರುಷೋತ್ತಮ ಪಿ. ಶೆಟ್ಟಿ, ವೆಸ್ಟ್ ಕೋಸ್ಟ್ ಗ್ರೂಪ್ ಎಂ.ಡಿ. ರಾಜಾರಾಂ ಹೆಗ್ಡೆ, ಫರ್ನೀಚರ್ ಮಾಲ್ ಎಂ.ಡಿ. ಸಲೀಂ, ಪರ್ಕಳ ಬಳಕೆದಾರರ ವೇದಿಕೆಯ ಅಧ್ಯಕ್ಷ ಅಬೂಬಕರ್ ಹಾಜಿ ಪರ್ಕಳ, ನೈನಾ ಫ್ಯಾನ್ಸಿಯ ಎಂ.ಡಿ. ಮುಹಮ್ಮದ್ ಮೌಲಾ, ಭಟ್ಕಳದ ಪಿಬಿಐ ಕನ್‌ಸ್ಟ್ರಕ್ಷನ್ ಕೊ. ಇದರ ಅಧ್ಯಕ್ಷ ಪಿ.ಬಿ.ಇಬ್ರಾಹೀಂ ಭಾಗವಹಿಸುವರು.

ಉಡುಪಿಯ ನೂತನ ಶೋರೂಂನಲ್ಲಿ ವಜ್ರ, ಪ್ಲಾಟಿನಂ, ಪೊಲ್ಕಿ, ಅನ್‌ಕಟ್ ಡೈಮಂಡ್ಸ್, ಅಮೂಲ್ಯ ರತ್ನದ ಹರಳುಗಳು, ಚಿನ್ನ, ಬೆಳ್ಳಿ, ಬ್ರಾಂಡೆಡ್ ವಾಚ್‌ಗಳ ವೈವಿಧ್ಯಮಯ ಸಂಗ್ರಹಗಳು ಗ್ರಾಹಕರಿಗೆ ಲಭ್ಯವಿದೆ.

ಉದ್ಘಾಟನಾ ವಿಶೇಷ ಕೊಡುಗೆಗಳು

ನೂತನ ಶೋರೂಂನ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ಹಲವು ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಒಂದು ಪವನ್ ಚಿನ್ನದ ತಯಾರಿ ವೆಚ್ಚದಲ್ಲಿ 1,250 ರೂ. ರಿಯಾಯಿತಿ, 10 ಸಾವಿರ ರೂ.ಗಿಂತ ಅಧಿಕ ಮೊತ್ತದ ಚಿನ್ನಾಭರಣದ ಖರೀದಿಸುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ ಸಿಗಲಿದೆ.

ಇನ್ನು ಡೈಮಂಡ್ ಕ್ಯಾರಟ್ ದರದ ಮೇಲೆ 8 ಸಾವಿರ ರೂ.ರಿಯಾಯಿತಿ. ಪೊಲ್ಕಿ, ಅನ್‌ಕಟ್ ಡೈಮಂಡ್ ಹಾಗೂ ಅಮೂಲ್ಯ ಆಭರಣಗಳ ತಯಾರಿ ವೆಚ್ಚದಲ್ಲಿ ಶೇ. 25ರಷ್ಟು ರಿಯಾಯಿತಿ, ಬೆಳ್ಳಿಯ ಮೇಲೆ ಶೇ.10, ಬ್ರಾಂಡೆಡ್ ವಾಚ್‌ಗಳ ಮೇಲೆ ಶೇ.7 ರಿಯಾಯಿತಿಯನ್ನು ಗ್ರಾಹಕರು ಪಡೆಯಲಿದ್ದಾರೆ. ಇದಲ್ಲದೆ ಪ್ರತೀ ದಿನ ಹಾಗೂ ತಿಂಗಳ ಲಕ್ಕಿ ಡ್ರಾ ಯೋಜನೆ ಕೂಡಾ ಇರಲಿದೆ. ಪ್ರತಿದಿನದ ಲಕ್ಕಿಡ್ರಾದಲ್ಲಿ ಅಡುಗೆಮನೆ ಸಾಮಗ್ರಿಗಳನ್ನು ಹಾಗೂ ತಿಂಗಳ ಲಕ್ಕಿಡ್ರಾದಲ್ಲಿ ಎಲ್‌ಇಡಿ ಟಿವಿ/ಫ್ರಿಡ್ಜ್/ವಾಷಿಂಗ್ ಮೆಶಿನ್‌ಗಳನ್ನು ಗೆಲ್ಲುವ ಸುರ್ಣಾವಕಾಶ ಗ್ರಾಹಕರಿಗೆ ಸಿಗಲಿದೆ.

ಸ್ವರ್ಣಾಭರಣಗಳಿಗೆ ಅತ್ಯಂತ ಕನಿಷ್ಠ ಮೇಕಿಂಗ್ ಚಾರ್ಜ್ ಘೋಷಿಸಲಾಗಿದೆ (ಶೇ.3ರಿಂದ ಆರಂಭ). ಅದಲ್ಲದೆ ಸುಲ್ತಾನ್‌ನಲ್ಲಿ ಯಾವುದೇ ವೇಸ್ಟೇಜ್ ಶುಲ್ಕ ಕೂಡಾ ಇರುವುದಿಲ್ಲ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಟಿಎಂ ಅಬ್ದುರ್ರವೂಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಕಾರ್ಪೊರೇಟ್ ಕಚೇರಿಯನ್ನು ಹೊಂದಿರುವ ಸುಲ್ತಾನ್ ಗ್ರೂಪ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಟಿಎಂ ಅಬ್ದುರ್ರವೂಫ್, ಅವರ ಸಹೋದರ, ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಟಿಎಂ ಅಬ್ದುಲ್ ರಹೀಂ ನೇತೃತ್ವ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News