ಮಕ್ಕಳಿಗೆ ಉಡುಗೊರೆಗಿಂತ ಪೋಷಕರ ಸಾಮಿಪ್ಯ ಅಗತ್ಯ: ದಾಸಿಲಾ

Update: 2019-03-15 17:04 GMT

ಮಂಗಳೂರು, ಮಾ.14: ಮಕ್ಕಳಿಗೆ ಪೋಷಕರು ಕೊಡುಗೆಗಳನ್ನು ಕೊಡುವುದಕ್ಕಿಂತ ಹೆಚ್ಚಿನ ಸಮಯವನ್ನು ಅವರ ಜತೆ ಕಳೆಯುವ ಮೂಲಕ, ಅವರ ಜತೆ ಸಾಮಿಪ್ಯ ಬೆಳೆಸುವ ಮೂಲಕ ಅವರಿಗೆ ಸಂತಸವನ್ನು ನೀಡಬೇಕು ಎಂದು ಕರ್ನಾಟಕ ಕರಾವಳಿ ತೀರ ಪಡೆಯ ಕಮಾಂಡರ್, ಡಿಐಜಿ ಎಸ್.ಎಸ್. ದಾಸಿಲಾ ಅಭಿಪ್ರಾಯಿಸಿದ್ದಾರೆ.

ಕೋಸ್ಟ್‌ಗಾರ್ಡ್ ಕೆಜಿ ತರಗತಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೇರಿದ್ದ ಪೋಷಕರಿಗೆ ಈ ಕಿವಿಮಾತು ನೀಡಿದರು.
ಮಕ್ಕಳಿಗೆ ಅಗತ್ಯವಿರುವುದು ಪೋಷಕರು ನೀಡುವ ಉಡುಗೊರೆಗಳಲ್ಲ. ಬದಲಾಗಿ ಅವರ ಜತೆ ಹೆಚ್ಚು ಸಮಯವನ್ನು ಕಳೆಯುವುದೇ ಅವರಿಗೆ ಕೊಡುವ ಉುಗೊರೆ ಎಂದು ಅವರು ಹೇಳಿದರು.

ಕುಂಜತ್ತಬೈಲ್‌ನ ಕೋಸ್ಟ್‌ಗಾರ್ಡ್ ಕಿಂಡರ್‌ಗಾರ್ಟನ್ ಸ್ಕೂಲ್‌ನಲ್ಲಿ ಉತ್ಸವವಾಗಿ ವಾರ್ಷಿಕ ದಿನವನ್ನು ಆಚರಿಸಲಾಗಿದ್ದು, ಪ್ರಾಂಶುಪಾಲರಾದ ಸರಿತಾ ಮನೊೀಹರ್ ವಾರ್ಷಿಕ ವರದಿ ಮಂಡಿಸಿದರು.

2001ರಿಂದ ಕೋಸ್ಟ್‌ಗಾರ್ಡ್‌ನ ಸಿಬ್ಬಂದಿಯ ಮಕ್ಕಳಿಗಾಗಿ ಆರಂಭಿಸಲಾದ ಈ ಶಾಲೆಯಲ್ಲಿ ಪ್ರಸ್ತುತ ಪರಿಸರದ ಶೇ. 70ರಷ್ಟು ಕೋಸ್ಟ್‌ಗಾರ್ಡ್ ಸಿಬ್ಬಂದಿಯೇತರ ಕುಟುಂಬಗಳ ಮಕ್ಕಳು ಕಲಿಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News